ಹೊಸಪೇಟೆ: ತಾಲೂಕಿನ ಡಣಾಯಕನಕೆರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ದಂಪತಿ ಗೆಲುವಿನ ನಗೆ ಬೀರಿದ್ದಾರೆ.
ಸೋಮಪ್ಪ 319 ಮತಗಳ ಮೂಲಕ ಹಾಗೂ ಅಕ್ಕಮಹಾದೇವಿ ಅವರು 276 ಮತ ಗಳಿಸಿ ಗೆಲುವು ಸಾಧಿಸಿದ್ದಾರೆ. ಮೊದಲ ಬಾರಿಗೆ ದಂಪತಿ ಒಟ್ಟಾಗಿ ಸ್ಪರ್ಧೆ ಮಾಡಿದ್ದು, ಗೆಲುವು ದಾಖಲಿಸಿದ್ದಾರೆ.
ಇಂದಿರಾನಗರ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಡಣಾಯಕನಕೆರೆ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿದೆ. ಮೊದಲ ಬಾರಿಗೆ ದಂಪತಿ ವಿಜಯಶಾಲಿಗಳಾಗಿರುವುದು ವಿಶೇಷವಾಗಿದೆ.