ಬಳ್ಳಾರಿ: ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಪ್ರತಿನಿತ್ಯ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆವರೆಗೆ ಸಾರ್ವಜನಿಕರು ಭೇಟಿ ಮಾಡಬಹುದು ಎಂದು ನಾಮಫಲಕ ಹಾಕಿಕೊಂಡಿದ್ದಾರೆ. ಆದರೆ ನಿನ್ನೆ ಮಧ್ಯಾಹ್ನ ಕಚೇರಿಗೆ ಗೈರಾಗಿದ್ದು ಸಾರ್ವಜನಿಕರು ಕಾದು ಕಾದು ಸುಸ್ತಾಗಿದ್ದಾರೆ.
ಕಾರಣ ಇಂದು ನಾಲ್ಕನೇ ಶನಿವಾರ ಮರುದಿನ ಭಾನುವಾರ ಆಗಿರುವ ಕಾರಣ ನಿನ್ನೆ ಮಧ್ಯಾಹ್ನದಿಂದಲೇ ಕಚೇರಿ ಕಡೆ ಹೋಗದೇ ಮನೆಯಲ್ಲಿ ಕಾಲ ಕಳೆದು ಸಂಜೆ 5 ಗಂಟೆಗೆ ತಮ್ಮ ಊರಿಗೆ ಪ್ರಯಾಣ ಮಾಡಿದ್ದಾರೆ. ಸಂಜೆ 4 ಗಂಟೆಯಿಂದ ಪಾಲಿಕೆ ಆವರಣದಲ್ಲಿ ನವ ಕರ್ನಾಟಕ ಯುವ ಶಕ್ತಿ ನೇತೃತ್ವದಲ್ಲಿ ರಾಘವ ಕಲಾ ಮಂದಿರ ಆಸ್ತಿ ತೆರಿಗೆ ವಿಚಾರದಲ್ಲಿ ಪ್ರತಿಭಟನೆ ನಡೆಸಿ, ಆಯುಕ್ತೆಗೆ ಪೋನ್ ಮಾಡಿದ್ದು, ಅವರು ರಿಸಿವ್ ಮಾಡಲಿಲ್ಲ.
ಅಲ್ಲದೇ ಮಾಧ್ಯಮ ಪ್ರತಿನಿಧಿಗಳು ಎಷ್ಟೋ ಬಾರಿ ಮಹಾನಗರ ಪಾಲಿಕೆ ವಿಚಾರವಾಗಿ ಮಾಹಿತಿ ಕೇಳಲು ಪೋನ್ ಮಾಡಿದ್ರೇ ರಿಸಿವ್ ಮಾಡಲ್ಲ ಹಾಗೇ ನಂಬರ್ಗಳನ್ನು ಬ್ಲಾಕ್ ಮಾಡುವ ಚಾಲಿ ಕಲಿತ್ತಿದ್ದಾರೆ ಎಂದು ಕೆಲವರು ಅಸಮಧಾನ ಹೊರಹಾಕಿದ್ದಾರೆ.