ಬಳ್ಳಾರಿ: ದೇವರು ಹೇಳಿದ್ದಾನೆ ಎಂದು ಪುಸಲಾಯಿಸಿ ಚರ್ಚ್ನ ಫಾದರ್ ಒಬ್ಬರು ಅಪ್ರಾಪ್ತೆಯ ಕೊರಳಿಗೆ ತಾಳಿ ಕಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹೊಸ ಶಾನವಾಸಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಫಾದರ್ ಜಾನಪ್ಪ (30) ಎಂಬಾತ ಮೇ 14 ರಂದು ಚರ್ಚ್ಗೆ ಬಂದಿದ್ದ ಅಪ್ರಾಪ್ತೆಗೆ, ದೇವರು ಹೇಳಿದ್ದಾನೆ ಎಂದು ಪುಸಲಾಯಿಸಿ ತಾಳಿ ಕಟ್ಟಿದ್ದಾನೆ. ತಾಯಿಯ ಸಮಕ್ಷಮದಲ್ಲಿಯೇ ಈ ಘಟನೆ ನಡೆದ ಹಿನ್ನೆಲೆ ಬಾಲಕಿಯು ದಿಗ್ಬ್ರಾಂತಳಾಗಿ ಕೆಲ ಕಾಲ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ.
ಘಟನೆ ಸಂಬಂಧ ಜೂನ್ 16 ರಂದು ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈಗ ಸಿರಿಗೇರಿ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆಯಾಗಿದ್ದು, ತನಿಖೆಯ ಹಂತದಲ್ಲಿದೆ. ಫಾದರ್ ಜಾನಪ್ಪ ತಲೆಮರೆಸಿಕೊಂಡಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ.