ಬಳ್ಳಾರಿ: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಎರಡನೇ ದಿನವಾದ ಇಂದು ಜಿಲ್ಲೆಯ 13 ಪರೀಕ್ಷಾ ಕೇಂದ್ರಗಳಲ್ಲಿ 2517 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
![Bellary Secondary PUC Supplementary Examination 2517 students in attendance](https://etvbharatimages.akamaized.net/etvbharat/prod-images/kn-04-bly-080920-puc-exam-news-ka10007_08092020165434_0809f_1599564274_655.jpg)
ಇತಿಹಾಸ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ ವಿಷಯಗಳಗಳಿಗೆ ಪರೀಕ್ಷೆ ನಡೆಯಿತು. 2795 ಒಟ್ಟು ನೋಂದಣಿಯಾದ ವಿದ್ಯಾರ್ಥಿಗಳಲ್ಲಿ 2517 ಪರೀಕ್ಷೆಗೆ ಹಾಜರಾಗಿದ್ದರು. 278 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗರಾಜಪ್ಪ ಅವರು ತಿಳಿಸಿದ್ದಾರೆ.