ಬಳ್ಳಾರಿ: ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳು ಹಾಗೂ ಆಡಳಿತಾರೂಢ ಪಕ್ಷದ ನಡುವೆ ಹೊಂದಾಣಿಕೆ ಕಾಣಿಸುತ್ತಿಲ್ಲ. ಈಗ ಬೀದಿ ಬದಿ ವ್ಯಾಪಾರಿಗಳಿಗೆ ತೆರಿಗೆ ವಿಧಿಸಿದ ವಿಚಾರವೂ ಇದೇ ಸಮನ್ವಯದ ಕೊರತೆಯಿಂದ ಹೊರಬಂದ ವಿವಾದವಾಗಿದೆ.
ಪಾಲಿಕೆ ಅಧಿಕಾರಿಗಳು ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ನಗರದಲ್ಲಿರುವ ಬೀದಿಬದಿ ವ್ಯಾಪಾರಿಗಳಿಗೆ ತೆರಿಗೆ ವಿಧಿಸುವ ಸಂಬಂಧ ಟೆಂಡರ್ ಪ್ರಕ್ರಿಯೆ ಮುಗಿಸಿದ್ದಾರೆ. ಇದೇ ಆಗಸ್ಟ್ ತಿಂಗಳಿಂದ ಟೆಂಡರ್ ಪಡೆದುಕೊಂಡವರು ತೆರಿಗೆ ಸಂಗ್ರಹಿಸುತ್ತಿದ್ದಾರೆ. ಆದರೆ ಈ ವಿಚಾರ ಮೇಯರ್ ಸೇರಿದಂತೆ ಸದಸ್ಯರ ಗಮನಕ್ಕೂ ತಂದಿಲ್ಲ ಅನ್ನೋದು ಕಾಂಗ್ರೆಸ್ ಆರೋಪ.
ಮಹಾನಗರ ಪಾಲಿಕೆ ಚುನಾವಣೆ ಪೂರ್ವದಲ್ಲಿ ತೆರಿಗೆ ಕಡಿಮೆ ಮಾಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮರೆತುಬಿಟ್ಟಿದೆ ಎಂಬ ಆರೋಪಗಳಿವೆ. ಶೀಘ್ರದಲ್ಲಿ ಸಾಮಾನ್ಯ ಸಭೆ ನಡೆಸಿ ವ್ಯಾಪಾರಿಗಳ ಮೇಲೆ ಹಾಕುವ ತೆರಿಗೆಯನ್ನು ರದ್ದು ಪಡಿಸುವುದಾಗಿ ಕೈ ಸದಸ್ಯರು ತಿಳಿಸಿದ್ದಾರೆ. ಇನ್ನೊಂದೆಡೆ, "ಪಾಲಿಕೆ ಈ ತೆರಿಗೆ ರದ್ದುಪಡಿಸಬೇಕು. ಇದರಿಂದ ನಮಗೆ ಸಾಕಷ್ಟು ಹೊರೆ ಆಗುತ್ತಿದೆ" ಅಂತಿದ್ದಾರೆ ಬೀದಿಬದಿ ವ್ಯಾಪಾರಿಗಳು.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ, ಖರ್ಗೆ, ಡಿಕೆಶಿ ಹೀಗೆ ಹತ್ತಾರು ಗುಂಪುಗಳಿವೆ: ರೇಣುಕಾಚಾರ್ಯ