ETV Bharat / city

ಬಳ್ಳಾರಿ ಪಾಲಿಕೆ ಆಯುಕ್ತೆ ಮೇಯರ್ ಆಡಳಿತಕ್ಕೆ ಸಹಕಾರ ನೀಡುತ್ತಿಲ್ಲ.. ಕೈ ಶಾಸಕ ಬಿ ನಾಗೇಂದ್ರ ಆರೋಪ - ಗ್ರಾಮೀಣ ಶಾಸಕ ಬಿ ನಾಗೇಂದ್ರ ಆರೋಪ

ಬಳ್ಳಾರಿ ಪಾಲಿಕೆಯಲ್ಲಿ ಕಾಂಗ್ರೆಸ್​ ಆಡಳಿತಕ್ಕೆ ಪಾಲಿಕೆ ಆಯುಕ್ತೆ ಸಹಕಾರ ನಿಡುತ್ತಿಲ್ಲ. ಇದರಿಂದ ನಗರದಲ್ಲಿ ಯಾವುದೇ ಕಾರ್ಯಗಳು ನಡೆಯುತ್ತಿಲ್ಲ ಎಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಆರೋಪಿಸಿದ್ದಾರೆ..

Bellary Corporation Commissioner
ಬಳ್ಳಾರಿ ಪಾಲಿಕೆ ಆಯುಕ್ತೆ ಮೇಯರ್ ಆಡಳಿತಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಆರೋಪ
author img

By

Published : Jun 24, 2022, 8:34 PM IST

ಬಳ್ಳಾರಿ : ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ಪಾಲಿಕೆಯ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಕಾಂಗ್ರೆಸ್ ಸದಸ್ಯರು ಹೇಳುವ ಕೆಲಸ ಮಾಡುತ್ತಿಲ್ಲ. ಆ ಬಗ್ಗೆ ಕೇಳಿದರೆ ಸರಿಯಾಗಿ ಉತ್ತರ ನೀಡುತ್ತಿಲ್ಲ. ಇದರಿಂದ ಆಯುಕ್ತೆ ಅವರು ಸರ್ಕಾರದ ಹಿಡಿತದಲ್ಲಿದ್ದಾರೆಯೇ ಎಂದು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಿ.ನಾಗೇಂದ್ರ ಪ್ರಶ್ನಿಸಿದ್ದಾರೆ.

ಅವರು ಬಳ್ಳಾರಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೇಯರ್ ಅವರು ಪಾಲಿಕೆಯಲ್ಲಿ ಸುಪ್ರೀಂ ಅವರ ಮಾರ್ಗದರ್ಶನದಂತೆ ಕಾನೂನು ರೀತಿ ಕೆಲಸ ಮಾಡಬೇಕು. ಅವರು ಮುಖ್ಯ ಕಾರ್ಯದರ್ಶಿ, ರಾಜ್ಯಪಾಲರು ಸಿಎಂಗೆ ಸಹಕರಿಸಿದಂತೆ ಮೇಯರ್​ಗೆ ಅವರು ಸಹಕಾರ ನೀಡುತ್ತಿಲ್ಲ. ಪಾಲಿಕೆಯಲ್ಲಿ ಯಾವುದೇ ಕೆಲಸಗಳು ಸಮರ್ಪವಾಗಿ ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಬಳ್ಳಾರಿ ಪಾಲಿಕೆ ಆಯುಕ್ತೆ ಮೇಯರ್ ಆಡಳಿತಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಕಾಂಗ್ರೆಸ್‌ ಶಾಸಕ ಬಿ ನಾಗೇಂದ್ರ ಅವರು ಆರೋಪಿಸಿರುವುದು..

ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ ಸ್ಥಳೀಯ ರಾಜಕಾರಣಿಗಳ ಹಿಡಿತದಲ್ಲಿರುವ ಬಗ್ಗೆ ಸಂಶಯ ಇದೆ. ಅವರನ್ನು ಬದಲಾವಣೆ ಮಾಡಿ ಎಂದು ಕೇಳಲ್ಲ, ಅಭಿವೃದ್ಧಿಗೆ ಸಹಕಾರ ನೀಡಲಿ. ಇಲ್ಲದಿದ್ದರೆ ಅವರ ಮೇಲೆ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡುತ್ತೇವೆ ಎಂದರು.

ಆರೋಪ ಅಲ್ಲಗಳೆದ ಆಯುಕ್ತೆ : ಎಲ್ಲಾ ಕೆಲಸಗಳನ್ನು ಕಾನೂನಿನ ರೀತಿ ಮಾಡಲಾಗುತ್ತದೆ. ಸಭೆಯಲ್ಲಿ ತೆಗೆದುಕೊಂಡ ನಿಯಮದಂತೆ ಕೆಲಸಗಳು ನಡೆಯುತಯುತ್ತಿವೆ. ಕೆಲವು ಯೋಜನೆಗಳು ವಸ್ತುಗಳ ಪೂರೈಕೆ ತಡವಾಗುವುದರಿಂದ ನಿಧಾನವಾಗುತ್ತದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಇದನ್ನೂ ಓದಿ: ಪೊಲೀಸ್ ಕಾನ್ಸ್‌ಟೇಬಲ್ ವರ್ಗಾವಣೆ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.