ಬಳ್ಳಾರಿ: ಹೂ ಮಾರಾಟಗಾರನ ಮೇಲೆ ಕರಡಿ ದಾಳಿ ಮಾಡಿದ ಘಟನೆ ಕೂಡ್ಲಿಗಿ ತಾಲೂಕಿನ ಪೊಪ್ಲಾಪುರದಲ್ಲಿ ನಡೆದಿದೆ.
ಟಿ.ಚಂದ್ರಪ್ಪ (35 ವರ್ಷ) ಎಂಬುವರು ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ಹೂವನ್ನು ಮಾರಾಟ ಮಾಡಲು ಭತ್ತನಹಳ್ಳಿಗೆ ಹೋಗುವಾಗ ದಾರಿ ಮಧ್ಯೆ ಕರಡಿ ದಾಳಿ ಮಾಡಿ ಗಾಯಗೊಳಿಸಿದೆ. ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದ ಚಂದ್ರಪ್ಪ ಅವರನ್ನು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ತಾಲೂಕು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.