ETV Bharat / city

ಬೆಂಗಳೂರಿನ ರಸ್ತೆಯಲ್ಲಿ ಬ್ಯಾಡ್ಮಿಂಟನ್​ ಆಡ್ತಿದ್ದವರು ಡ್ರೋನ್​ ಕಂಡು ಓಟಕಿತ್ತರು- ವಿಡಿಯೋ - ಕೋವಿಡ್​-19

ಪೊಲೀಸರು ಅದೆಷ್ಟೇ ಜಾಗೃತಿ ಮೂಡಿಸಿ ಕಠಿಣ ಕ್ರಮ ಕೈಗೊಂಡಿದ್ದರೂ ಸಹ ಕೆಲವರು ರಸ್ತೆಗಿಳಿಯುತ್ತಿದ್ದಾರೆ. ಜನರನ್ನು ಗಮನಿಸಲು ಬೆಂಗಳೂರು ಪೊಲೀಸರು ಡ್ರೋನ್​ ಮೊರೆ ಹೋಗಿದ್ದಾರೆ. ಸದ್ಯ ವೀಕೆಂಡ್​ ಅಂತ ರಸ್ತೆಯಲ್ಲಿ ಆಟವಾಡುತ್ತಿದ್ದ ಬ್ಯಾಡ್ಮಿಂಟನ್​​ ಅಟಗಾರರು ಡ್ರೋನ್​ ಕ್ಯಾಮರಾ ನೋಡುತ್ತಲೇ ಕಾಲ್ಕಿತ್ತಿರುವ ವಿಡಿಯೋ ವೈರಲ್​ ಆಗಿದೆ.

bangalore-badminton-players-ran-away-after-seeing-police-drone-camera
ಡ್ರೋನ್ ಕಂಡು ಕಾಲ್ಕಿತ್ತ ಬ್ಯಾಡ್ಮಿಂಟನ್​ ಆಟಗಾರರು
author img

By

Published : Apr 19, 2020, 3:50 PM IST

ಬೆಂಗಳೂರು: ಲಾಕ್​ಡೌನ್​ ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿಯುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗೆ ಬೇಕಾಬಿಟ್ಟಿ ರಸ್ತೆಗಿಳಿದು ಬ್ಯಾಡ್ಮಿಂಟನ್​ ಆಡುತ್ತಿದ್ದವರನ್ನು ಡ್ರೋನ್ ಕ್ಯಾಮರಾ ಓಡಿಸಿದೆ. ​

ನಗರದ ದಕ್ಷಿಣ ವಿಭಾಗದಲ್ಲಿ‌ ಡ್ರೋನ್ ಕಾರ್ಯಾಚರಣೆ ಮೂಲಕ ರಸ್ತೆಗೆ ಬರುವವರ ಮೇಲೆ ಕಣ್ಣಿಡಲಾಗಿದೆ. ವೀಕೆಂಡ್​​ ಮಸ್ತಿಯಲ್ಲಿ ಕೊರೊನಾ ಮರೆತು ರಸ್ತೆಯಲ್ಲಿ ಬ್ಯಾಡ್ಮಿಂಟನ್​ ಆಡ್ತಿದ್ದವರು ಡ್ರೋನ್ ಕಂಡು ಓಡಿರುವ ದೃಶ್ಯ ಸೆರೆಯಾಗಿದ್ದು, ಸದ್ಯ ಪೊಲೀಸರು ವಿಡಿಯೋವನ್ನು ವೈರಲ್ ಮಾಡಿದ್ದಾರೆ.

ಡ್ರೋನ್ ಕಂಡು ರಸ್ತೆಯಲ್ಲಿ ಬ್ಯಾಡ್ಮಿಂಟನ್​ ಆಡ್ತಿದ್ದವರು ಮನೆಗೆ ಓಡಿದರು.

ಕೊರೊನಾ ವೈರಸ್​ ಭೀಕರತೆ ಮರೆತವರು ಪೊಲೀಸರು ಬೀಟ್​ಗೆ ಬಂದಾಗ ಮನೆಯಲ್ಲಿದ್ದು, ಅವರು ಹೋದಾಗ ರಸ್ತೆಗಿಳಿಯುತ್ತಿದ್ದಾರೆ. ಹೀಗಾಗಿ ಪೊಲೀಸರ ಕಣ್ತಪ್ಪಿಸಿ ಹೊರಗಡೆ ಬರುವ ಜನರ ಹೆಡೆಮುರಿಕಟ್ಟಲು ಡ್ರೋನ್ ಬಳಸಲಾತ್ತಿದೆ. ಸದ್ಯ ಬ್ಯಾಡ್ಮಿಂಟನ್​ ಆಡುತಿದ್ದ ಯುವಕರು ಡ್ರೋನ್ ಕ್ಯಾಮರಾ ನೋಡಿದ ಕೂಡಲೇ ಎಸ್ಕೇಪ್ ಆಗಿರೋದು ವಿಡಿಯೋದಲ್ಲಿ ಸೆರೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.