ಬಳ್ಳಾರಿ : ಸಿದ್ದರಾಮೋತ್ಸವ ಎಂದರೆ ಇದೇನು ಹಂಪಿ ಉತ್ಸವ, ಸಿದ್ಧಗಂಗಾ ಮಠದ ಉತ್ಸವದಂತೆಯೇ? ಇನ್ನು ಮುಂದೆ ಆಗಸ್ಟ್ 3 ಸಿದ್ದರಾಮೋತ್ಸವ ಅಂತ ಶಾಬಾದಿಮಠ ಕ್ಯಾಲೆಂಡರ್ನಲ್ಲಿ ಹಾಕಿಸಬೇಕು. ಸಿದ್ದರಾಮೋತ್ಸವ ಅಂತ ಕಾಂಗ್ರೆಸ್ಸಿನವರು ಆಚರಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಉತ್ಸವ ಮೂರ್ತಿ ಮಾಡುತ್ತಿದ್ದಾರೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ. ಶ್ರೀರಾಮುಲು ಲೇವಡಿ ಮಾಡಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಮೀಸಲಾತಿ ಲಾಭ ಪಡೆದ ರಾಜಕೀಯ ನಾಯಕರಿಗೆ ನಾನು ಉತ್ತರ ಕೊಡಲ್ಲ. ಕಾಂಗ್ರೆಸ್ನವರು ಕೇವಲ ವೋಟ್ ಬ್ಯಾಂಕ್ಗಾಗಿ ಈ ಸಮುದಾಯಗಳನ್ನು ಬಳಸಿಕೊಂಡರು. ಸ್ವಯಂ ಘೋಷಿತ ಹಿಂದುಳಿದ ನಾಯಕ ಸಿದ್ದರಾಮಯ್ಯ ಯಾಕೆ ಮೀಸಲಾತಿ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ನನ್ನ ಹೇಳಿಕೆಗೆ ಈಗಲೂ ಬದ್ದನಾಗಿದ್ದೇನೆ. 2006 ರಿಂದ ಈ ಸಮುದಾಯಕ್ಕೆ ಯಾವೆಲ್ಲಾ ಮಾತುಕೊಟ್ಟಿದ್ದೆ ಎಲ್ಲವನ್ನೂ ಈಡೇರಿಸಿದ್ದೇನೆ. ವಾಲ್ಮೀಕಿ ಜಯಂತಿ, ವಾಲ್ಮೀಕಿ ನಿಗಮ, ಪ್ರತ್ಯೇಕ ಸಚಿವಾಲಯ, ರಾಜ್ಯದ ಎಲ್ಲ ಕಡೆ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಮಾಡಿದ್ದೇವೆ. ಮೀಸಲಾತಿ ವಿಚಾರದ ಬಗ್ಗೆ ಈಗಾಗಲೇ ಸಿಎಂ ಜೊತೆ ಮಾತನಾಡಿದ್ದೇನೆ. ಶೀಘ್ರದಲ್ಲೇ ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಸಿಹಿ ಸುದ್ದಿ ಕೊಡುತ್ತೇವೆ ಎಂದರು.
ಇದನ್ನೂ ಓದಿ : ಸಿದ್ದರಾಮೋತ್ಸವ ಆಚರಣೆ ಅಗತ್ಯವಿರಲಿಲ್ಲ: ಸಂಸದ ಶ್ರೀನಿವಾಸ್ ಪ್ರಸಾದ್