ETV Bharat / city

ಹೊಸಪೇಟೆ : ನಾಲ್ಕು ನಕಲಿ ವೈದ್ಯರ ಬಂಧನ, ಪ್ರಕರಣ ದಾಖಲು - ಮರಿಯಮ್ಮನಹಳ್ಳಿ ನಕಲಿ ವೈದ್ಯರ ಬಂಧನ

ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಪಟ್ಟಣ ಹಾಗೂ ಹೋಬಳಿಯಲ್ಲಿ ನಿನ್ನೆ ರಾತ್ರಿ ನಾಲ್ಕು ನಕಲಿ ವೈದ್ಯರನ್ನು ಬಂಧಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.‌ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಹನುಮಂತಪ್ಪ ತಳವಾರ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ.ಭಾಸ್ಕರ್ ಜಂಟಿ ಕಾರ್ಯಾಚರಣೆ ನಡೆಸಿ, ನಕಲಿ ವೈದ್ಯರನ್ನು ಬಂಧಿಸಿದ್ದಾರೆ..

arrest-of-four-fake-doctors-in-hospet
ನಾಲ್ಕು ನಕಲಿ ವೈದ್ಯರ ಬಂಧನ
author img

By

Published : Jun 11, 2021, 9:10 AM IST

ಹೊಸಪೇಟೆ : ಕೋವಿಡ್​ ಪ್ರಾರಂಭವಾದಾಗಿನಿಂದ ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣ ಹಾಗೂ ಹೋಬಳಿಯಲ್ಲಿ ನಿನ್ನೆ ರಾತ್ರಿ ನಾಲ್ಕು ನಕಲಿ ವೈದ್ಯರನ್ನು ಬಂಧಿಸಿರುವ ಪೊಲೀಸರು, ಪ್ರಕರಣ ದಾಖಲಿಸಿದ್ದಾರೆ.‌

ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಹನುಮಂತಪ್ಪ ತಳವಾರ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ.ಭಾಸ್ಕರ್ ಜಂಟಿ ಕಾರ್ಯಾಚರಣೆ ನಡೆಸಿ, ನಕಲಿ ವೈದ್ಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಾಲ್ಕು ನಕಲಿ ವೈದ್ಯರ ಬಂಧನ

ಮರಿಯಮ್ಮನಹಳ್ಳಿ ಪಟ್ಟಣ ಹಾಗೂ ಹೋಬಳಿಯಾದ್ಯಂತ ವಿವಿಧ ಗ್ರಾಮಗಳಲ್ಲಿ ವೈದ್ಯಕೀಯ ವಿದ್ಯಾರ್ಹತೆ ಇಲ್ಲದೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ ಮಾಡಿಕೊಂಡು ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿದ್ದರು. ಯಾವುದೇ ರೀತಿ ಆರೋಗ್ಯ ಇಲಾಖೆಯಿಂದ ಪರವಾನಿಗೆ ಪಡೆಯದೇ, ಗ್ರಾಮಗಳಲ್ಲಿ ಮನೆಗಳಿಗೆ ತೆರಳಿ ಚುಚ್ಚುಮದ್ದು ನೀಡುತ್ತಿದ್ದರು.

ಈ ಕುರಿತು ಖಚಿತ ಮಾಹಿತಿ‌ ಪಡೆದ ಪೊಲೀಸರು ದಾಳಿ ನಡೆಸಿ ತಿಮ್ಮಲಾಪುರದಲ್ಲಿ ಮಹೇಶ್, ಚಿಲಕನಹಟ್ಟಿಯ ಮಲ್ಲಿಕಾರ್ಜುನ್, ಸೋಮಶೇಖರ್, ಮರಿಯಮ್ಮನಹಳ್ಳಿಯ ಪಂಪಾಪತಿ ಎಂಬುವರನ್ನು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.