ETV Bharat / city

ಬಳ್ಳಾರಿಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್: ಸೋಂಕಿತರ ಸಂಖ್ಯೆ 18ಕ್ಕೆ

ಗುಜರಾತ್​ನ ಅಹಮಾಬಾದ್ ನಗರದಿಂದ ಮೂರು ದಿನಗಳ ಹಿಂದಷ್ಟೇ ಬಳ್ಳಾರಿಯ ಜಿಲ್ಲೆಯ ಹರಪನಹಳ್ಳಿಗೆ ಆಗಮಿಸಿದ್ದ 46 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

Another Corona Positive Case Detected In Bellary
ಬಳ್ಳಾರಿಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್​ ಕೇಸ್​ ಪತ್ತೆ..ಸೋಂಕಿತರ ಸಂಖ್ಯೆ 18ಕ್ಕೆ ಏರಿಕೆ
author img

By

Published : May 16, 2020, 8:08 AM IST

ಬಳ್ಳಾರಿ: ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು,ಹರಪನಹಳ್ಳಿ ಮೂಲದ 46 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಮೂರನೇ ಹಂತದ ಲಾಕ್​ಡೌನ್ ಸಡಿಲಿಕೆ ಹಿನ್ನಲೆ, ಈತ ಗುಜರಾತ್​ನ ಅಹಮಾಬಾದ್ ನಗರದಿಂದ ಮೂರು ದಿನಗಳ ಹಿಂದಷ್ಟೇ ಹರಪನಹಳ್ಳಿಗೆ ಆಗಮಿಸಿದ್ದರು. ಅಂತಾರಾಜ್ಯ ಗಡಿಭಾಗದ ಚೆಕ್​​ಪೊಸ್ಟ್​ನಲ್ಲಿ‌ ಈತನಿಗೆ ಕೋವಿಡ್-19 ತಪಾಸಣೆ ನಡೆಸಿ, ಗಂಟಲು ದ್ರವದ ಮಾದರಿಯನ್ನ ಪರೀಕ್ಷೆ ಕಳುಹಿಸಲಾಗಿತ್ತು. ಬಳಿಕ ಅವರನ್ನ ಜಿಂದಾಲ್ ಓಪಿಜೆ ಸೆಂಟರ್​ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

ನಿನ್ನೆ ಈತನ ಪರೀಕ್ಷಾ ವರದಿ ಬಂದಿದ್ದು,ಕೊರೊನಾ ಪಾಸಿಟಿವ್​ ಬಂದಿದೆ. ಹೀಗಾಗಿ ಈತನನ್ನ ಕೋವಿಡ್ -19 ಆಸ್ಪತ್ರೆಗೆ ಶಿಫ್ಟ್ ಮಾಡಿ, ಟ್ರಾವೆಲ್​ ಹಿಸ್ಟರಿ ಹುಡುಕಾಟ ನಡೆಸಲಾಗುತ್ತದೆ ಎಂದು ಡಿಹೆಚ್​ಒ ಡಾ.ಹೆಚ್.ಎಲ್.ಜನಾರ್ದನ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೂ 17 ಪಾಸಿಟಿವ್ ಪ್ರಕರಣಗಳಿದ್ದು,ಇದೀಗ ಸೋಂಕಿತರ ಸಂಖ್ಯೆ18ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.