ಬಳ್ಳಾರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಕಿರಿಯ ಆರೋಗ್ಯ ಸಹಾಯಕರು ಮುಗಿಬಿದ್ದ ಘಟನೆ ನಡೆದಿದೆ.
ನಗರದ ಹವಂಬಾವಿ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಕಿರಿಯ ಆರೋಗ್ಯ ಸಹಾಯಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಮನವಿ ಸಲ್ಲಿಸಿದ ಬಳಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು. ನನಗೆ ಟೈಮ್ ಇಲ್ಲ ಬಾಬು ಮುಂದ್ಹೋಗಿ ಎಂದು ಸಚಿವರು ಕೋರಿದ್ರೂ ಕೂಡ ಕಿರಿಯ ಆರೋಗ್ಯ ಸಹಾಯಕರು ಮಾತ್ರ ಸೆಲ್ಫಿ ತೆಗೆಯುವುದರಲ್ಲಿ ತಲ್ಲೀನರಾದರು.
ಇದಕ್ಕೂ ಮುಂಚೆ ಸಾರ್ವಜನಿಕ ಕುಂದುಕೊರತೆ ಆಲಿಸುವ ವೇಳೆ, ಮಹಿಳೆಯೋರ್ವಳು ವೈದ್ಯಕೀಯ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿದ್ರು. ಆ ಅರ್ಜಿಯನ್ನು ಸಚಿವ ಶ್ರೀರಾಮುಲು ಅವರ ಕೈಗಿತ್ತಾಗ ಮಹಿಳೆಯ ಕಣ್ಣಾಲಿಗಳು ಒದ್ದೆಯಾಗಿದ್ದವು.