ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಹೊಸದಾಗಿ 99 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1,118ಕ್ಕೇರಿದೆ.
ಕೇವಲ ಜಿಂದಾಲ್ ಕಂಪನಿಯೊಂದರಲ್ಲೇ ಈವರೆಗೂ 450 ನೌಕರರಿಗೆ ಈ ಮಹಾಮಾರಿಯ ಸೋಂಕು ಅಂಟಿದೆ. ಜಿಲ್ಲೆಯ 1,118 ಸೋಂಕಿತರ ಪೈಕಿ 503 ಮಂದಿ ಗುಣಮುಖರಾಗಿದ್ದಾರೆ. 34 ಮಂದಿ ಸಾವನ್ನಪ್ಪಿದ್ದಾರೆ. 581 ಸಕ್ರಿಯ ಪ್ರಕರಣಗಳಿವೆ.