ETV Bharat / city

ಹಂಪಿ ಅಭಿವೃದ್ಧಿಗೆ ಕೇಂದ್ರದಿಂದ 480 ಕೋಟಿ ರೂ. ಅನುದಾನ: ಸಚಿವ ಆನಂದ್ ಸಿಂಗ್ - ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನ

ಇಡೀ ಪ್ರಪಂಚದಲ್ಲಿ ಹಂಪಿಯಲ್ಲಿ ಅತ್ಯದ್ಭುತವಾದ ಸ್ಥಳಗಳಿವೆ. ಅವುಗಳನ್ನು ಸಂಶೋಧನೆ ಮಾಡಬೇಕು. ಜನರಿಗೆ ನೈಜ ಸತ್ಯ ತಿಳಿಸಬೇಕಾಗಿದೆ. ಅಲ್ಲದೇ, ವಿಜಯನಗರ ಸಾಮ್ರಾಜ್ಯವನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.

480-crore-from-hampi-development-minister-anand-singh
ಹಂಪಿ ಅಭಿವೃದ್ಧಿಗೆ ಕೇಂದ್ರದಿಂದ 480 ಕೋಟಿ ರೂ. ಅನುದಾನ: ಸಚಿವ ಆನಂದ್ ಸಿಂಗ್
author img

By

Published : Feb 12, 2021, 2:42 PM IST

ಹೊಸಪೇಟೆ (ಬಳ್ಳಾರಿ): ಹಂಪಿ ಅಭಿವೃದ್ಧಿಗೆ ಕಾರ್ಯಸೂಚಿ ಸಿದ್ಧಪಡಿಸಲಾಗುತ್ತಿದೆ. ಹಂಪಿ ಅಭಿವೃದ್ಧಿಗೆ ಕೇಂದ್ರದಿಂದ 480 ಕೋಟಿ ರೂ. ಅನುದಾನ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.

ಹಂಪಿ ಅಭಿವೃದ್ಧಿಗೆ ಕೇಂದ್ರದಿಂದ 480 ಕೋಟಿ ರೂ. ಅನುದಾನ: ಸಚಿವ ಆನಂದ್ ಸಿಂಗ್

ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಮುಂಭಾಗ ಕನ್ನಡ ಮತ್ತು ಸಂಸ್ಕೃತಿ‌‌ ಇಲಾಖೆ ಹಾಗೂ ಜಿಲ್ಲಾಡಳಿತ ಜಂಟಿಯಾಗಿ ಹಮ್ಮಿಕೊಂಡಿದ್ದ ಪುರಂದರದಾಸರ ಆರಾಧನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಂಪಿಯ ಬಹಳಷ್ಟು ಸ್ಥಳಗಳನ್ನು‌‌ ನೋಡಿಲ್ಲ. ಅವುಗಳನ್ನು ನೋಡಿ ವಿಚಿತ್ರ ಅನಿಸುತ್ತದೆ. ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆಯೊಂದಿಗೆ ಚರ್ಚೆ ನಡೆಸಲಾಯಿತು. ಹಂಪಿಯಲ್ಲಿ ಶೇ 10 ರಷ್ಟೂ ಸಂಶೋಧನೆ ನಡೆದಿಲ್ಲ. ಇನ್ನೂ ಶೇ 90ರಷ್ಟು ಸಂಶೋಧನೆ ನಡೆಯಬೇಕು ಎನ್ನುತ್ತಿದ್ದಾರೆ ಅಧಿಕಾರಿಗಳು ಎಂದರು.

ಇಡೀ ಪ್ರಪಂಚದಲ್ಲಿ ಹಂಪಿಯಲ್ಲಿ ಅತ್ಯದ್ಭುತವಾದ ಸ್ಥಳಗಳಿವೆ. ಅವುಗಳನ್ನು ಸಂಶೋಧನೆ ಮಾಡಬೇಕು. ಜನರಿಗೆ ನೈಜ ಸತ್ಯವನ್ನು ತಿಳಿಸಬೇಕಾಗಿದೆ. ಅಲ್ಲದೇ, ವಿಜಯನಗರ ಸಾಮ್ರಾಜ್ಯವನ್ನು ಉಳಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ಹೇಳಿದರು. ನಂತರ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು‌ ನಡೆದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.