ಹೊಸಪೇಟೆ: ವಿಜಯನಗರ ಜಿಲ್ಲೆಯ ಕೊಟ್ಟೂರಿನ ಸುಕ್ಷೇತ್ರ ಗುರುಬಸವೇಶ್ವರ ಹುಂಡಿ ಎಣಿಕೆ ಮಾಡಲಾಗಿದ್ದು, 37 ದಿನಗಳಲ್ಲಿ ಬರೋಬ್ಬರಿ 25.55 ಲಕ್ಷ ರೂ. ಭಕ್ತರಿಂದ ದೇಣಿಗೆ ಸಂಗ್ರಹವಾಗಿದೆ.
ಫೆ.23 ರಂದು ದೇವಸ್ಥಾನ ಪ್ರಾಂಗಣ, ದಾಸೋಹದ ಹತ್ತಿರ ಹಾಗೂ ತಾತ್ಕಾಲಿಕವಾಗಿ ಹುಂಡಿಗಳನ್ನು ಅಳವಡಿಸಲಾಗಿತ್ತು. ದೇವಸ್ಥಾನದಲ್ಲಿ ಒಟ್ಟು 11 ಹುಂಡಿಗಳನ್ನು ಅಳವಡಿಸಲಾಗಿತ್ತು. ಈ 37 ದಿನಗಳಲ್ಲಿ ಬರೋಬ್ಬರಿಗೆ 25.55 ಲಕ್ಷ ರೂ. ಭಕ್ತರಿಂದ ದೇಣಿಗೆ ಸಂಗ್ರಹವಾಗಿ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಂ.ಎಚ್.ಪ್ರಕಾಶ್ ರಾವ್ ತಿಳಿಸಿದರು.