ಬೆಳಗಾವಿ: ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಯುವಕ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ, ರೊಚ್ಚಿಗೆದ್ದ ಕುಟುಂಬಸ್ಥರಿಂದ ಖಾಸಗಿ ಆಸ್ಪತ್ರೆ ಮೇಲೆ ದಾಳಿ ನಡೆಸಿ ಪೀಠೋಪಕರಣ ಧ್ವಂಸ ಮಾಡಿದ ಘಟನೆ ಖಾನಾಪೂರ ವರ್ದೆ ಕಾಲೋನಿಯಲ್ಲಿ ನಡೆದಿದೆ.
ಮೃತ ಯುವಕ ಸೂರಜ್ ಗಾವಡೆ (17) ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಬೆಳಗ್ಗೆ ಆಸ್ಪತ್ರೆಯ ವೈದ್ಯರು ಇಂಜೆಕ್ಷನ್ ನೀಡುತ್ತಿದ್ದಂತೆ ಸೂರಜ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಯುವಕನ ಸಾವಿನಿಂದಾಗಿ ರೊಚ್ಚಿಗೆದ್ದ ಕುಟುಂಬಸ್ಥರು ಆಸ್ಪತ್ರೆಯ ಒಳನುಗ್ಗಿ ಗಲಾಟೆ ಮಾಡಿ ಅಲ್ಲಿದ್ದ ಪೀಠೋಪಕರಣ, ವೈದ್ಯಕೀಯ ಪರಿಕರಗಳನ್ನು ಧ್ವಂಸ ಮಾಡಿದ್ದಾರೆ.
ಖಾನಾಪೂರ ಪಟ್ಟಣದ ವರ್ದೆ ಕಾಲೋನಿಯ ಡಾ.ರಾಯಣ್ಣವರ ಎಂಬುವರಿಗೆ ಸೇರಿದ ಆಸ್ಪತ್ರೆ ಇದಾಗಿದೆ.