ETV Bharat / city

VIDEO: ತಾನೇ ಸೀರೆ ಹರಿದುಕೊಂಡು ಪಿಡಿಒ ಮೇಲೆ ರೋಷಾವೇಶ - ಮಹಿಳೆಯ ಹೈಡ್ರಾಮಾ! - ತಾನೇ ಸೀರೆ ಹರಿದುಕೊಂಡ ಮಹಿಳೆ

ತುಕ್ಕಾನಟ್ಟಿ ಗ್ರಾಮದ ಪಿಡಿಒ ವೀರಭದ್ರ ಗುಂಡಿ ಮೇಲೆ, ಭೂಮಿ ಒತ್ತವರಿ ಮಾಡಿಕೊಂಡವರು ಹಲ್ಲೆಗೆ ಯತ್ನಿಸಿದ್ದಾರೆ. ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯಲು ಮುಂದಾಗುತ್ತಿದ್ದಂತೆ ಮಹಿಳೆಯೊಬ್ಬರು ಸ್ವತಃ ತಾವೇ ಸೀರೆ ಹರಿದುಕೊಂಡು ಹೈಡ್ರಾಮಾ ಮಾಡಿದ್ದಾರೆ.

women high drama
ಮಹಿಳೆಯ ಹೈಡ್ರಾಮಾ!
author img

By

Published : Oct 16, 2021, 2:14 PM IST

ಬೆಳಗಾವಿ: ಭೂಮಿ ಒತ್ತುವರಿ ಮಾಡಿ ನಿರ್ಮಿಸಿದ್ದ ಕಾಂಪೌಂಡ್​​ ತೆರವುಗೊಳಿಸಲು ಹೋಗಿದ್ದ ಪಿಡಿಒ ಮೇಲೆ ಸ್ಥಳೀಯರು ಹಲ್ಲೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದಿದೆ.

ಮಹಿಳೆಯ ಹೈಡ್ರಾಮಾ!

ತುಕ್ಕಾನಟ್ಟಿ ಗ್ರಾಮದ ಪಿಡಿಒ ವೀರಭದ್ರ ಗುಂಡಿ ಮೇಲೆ, ಭೂಮಿ ಒತ್ತವರಿ ಮಾಡಿಕೊಂಡವರು ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ, ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯಲು ಮುಂದಾಗುತ್ತಿದ್ದಂತೆ ಮಹಿಳೆಯೊಬ್ಬರು ಹೈಡ್ರಾಮಾ ಮಾಡಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ತಾನೇ ಸೀರೆ ಹರಿದುಕೊಂಡು ನನ್ನನ್ನು ಪಿಡಿಒ ಎಳೆದಾಡಿದ್ದಾನೆ ಎಂದು ಬಾಳವ್ವಾ ಹುಲಕುಂದ ಎಂಬ ಮಹಿಳೆ ಹೈಡ್ರಾಮಾ ಮಾಡಿದ್ದಾರೆ.

ಇದನ್ನೂ ಓದಿ: ಉಳ್ಳಾಲದಲ್ಲಿ ಬೈಕ್​ ಅಪಘಾತ.. ಇಬ್ಬರು ಯುವಕರ ದುರ್ಮರಣ

ಸಿದ್ದಪ್ಪ, ಯಮನಪ್ಪಾ, ವೆಂಕಪ್ಪ ಹುಲಕುಂದ ಎಂಬುವವರ ವಿರುದ್ಧ ಪಿಡಿಒ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಪಿಡಿಒ ವೀರಭದ್ರಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಆಪ್ತ ಸಿದ್ದಪ್ಪ ಹಮ್ಮನವರ ಎಂಬವರು ಧಮ್ಕಿ ಹಾಕಿದ್ದಾರೆ ಎನ್ನುವ ಆರೋಪವೂ ಇದೆ. ಮಹಿಳೆಯರನ್ನು ಎಳೆದಾಡಿರುವ ಬಗ್ಗೆ ದೂರು ನೀಡುವ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಪಿಡಿಒ ವೀರಭದ್ರ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.