ETV Bharat / city

ನಾಳೆಯಿಂದ ಕುಂದಾನಗರಿಯಲ್ಲಿ ಚಳಿಗಾಲ ಅಧಿವೇಶನ: ಪ್ರತಿಪಕ್ಷಗಳ ಸವಾಲು ಎದುರಿಸಲು ಸಿದ್ಧವಾಯ್ತು ಬೊಮ್ಮಾಯಿ ಸರ್ಕಾರ

ನಾಳೆಯಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ರಾಜಕೀಯ ಪ್ರಾಮುಖ್ಯದ ವಿಚಾರಗಳೇ ಹೆಚ್ಚು ಸದ್ದು ಮಾಡಲಿವೆ. ಬಿಟ್-ಕಾಯಿನ್ ಹಗರಣ, ಶೇಕಡಾ 40ರ ಕಮಿಷನ್ ಆರೋಪ, ಮಳೆ ಹಾನಿ ಪರಿಹಾರ ವೈಫಲ್ಯ, ಮತಾಂತರ ತಡೆಗೆ ಹೊಸ ಕಾಯ್ದೆ, ಕೊರೊನಾ ನಿರ್ವಹಣೆ, ಮೇಕೆದಾಟು ಅಣೆಕಟ್ಟು ಯೋಜನೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಹಲವು ವಿಷಯಗಳು ಪ್ರಸ್ತಾಪವಾಗುವ ಸಾಧ್ಯತೆ ಇದೆ.

winter-session-starts-from-tomorrow
ಚಳಿಗಾಲದ ಅಧಿವೇಶನ
author img

By

Published : Dec 12, 2021, 1:26 PM IST

ಬೆಂಗಳೂರು : ಕುಂದಾನಗರಿ ಬೆಳಗಾವಿಯಲ್ಲಿ ನಾಳೆಯಿಂದ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದ್ದು, ಸರ್ಕಾರದ ವೈಫಲ್ಯ, ಹಗರಣಗಳ ಆರೋಪ, ಹಣಕಾಸು ಸ್ಥಿತಿಗತಿ ಕುರಿತು ಪ್ರತಿ ಪಕ್ಷಗಳಿಂದ ಎದುರಾಗಲಿರುವ ಟೀಕಾಸ್ತ್ರಗಳನ್ನು ಎದುರಿಸಲು ರಾಜ್ಯ ಸರ್ಕಾರ ಎಲ್ಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ. ಪ್ರತಿಪಕ್ಷದ ದಾಳಿಗೆ ಸದನದಲ್ಲೇ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧವಾಗಿದೆ.

ಚಳಿಗಾಲ ಅಧಿವೇಶನದ ಪ್ರಮುಖ ಅಂಶಗಳು: ಸೋಮವಾರದಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ರಾಜಕೀಯ ಪ್ರಾಮುಖ್ಯದ ವಿಚಾರಗಳೇ ಹೆಚ್ಚು ಸದ್ದು ಮಾಡಲಿವೆ. ಬಿಟ್-ಕಾಯಿನ್ ಹಗರಣ, ಶೇಕಡಾ 40ರ ಕಮಿಷನ್ ಆರೋಪ, ಮಳೆ ಹಾನಿ ಪರಿಹಾರ ವೈಫಲ್ಯ, ಮತಾಂತರ ತಡೆಗೆ ಹೊಸ ಕಾಯ್ದೆ, ಕೊರನಾ ನಿರ್ವಹಣೆ, ಮೇಕೆದಾಟು ಅಣೆಕಟ್ಟು ಯೋಜನೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಹಲವು ವಿಷಯಗಳು ಪ್ರಸ್ತಾಪವಾಗುವ ಸಾಧ್ಯತೆ ಇದೆ. ಪ್ರತಿಪಕ್ಷಗಳು ಪ್ರಸ್ತಾಪಿಸಲಿರುವ ಈ ಎಲ್ಲಾ ವಿಷಯಗಳಿಗೆ ತಕ್ಕ ಉತ್ತರ ನೀಡಿ ಪ್ರತಿ ಪಕ್ಷಗಳ ಬಾಯಿ ಮುಚ್ಚಿಸಲು ಆಡಳಿತಾರೂಢ ಬಿಜೆಪಿ ಕೂಡ ತಾಲೀಮು ನಡೆಸುತ್ತಿದೆ.

ಬಿಟ್ ಕಾಯಿನ್ ಪ್ರಕರಣ : ರಾಜ್ಯ ಸರ್ಕಾರವನ್ನು ಬೆಂಬಿಡದೇ ಕಾಡುತ್ತಿರುವ ಬಿಟ್ ಕಾಯಿನ್ ಹಗರಣ ಪ್ರಕರಣ ಬೆಳಗಾವಿ ಅಧಿವೇಶನದಲ್ಲಿ ಭಾರಿ ಸದ್ದು ಮಾಡಲಿದೆ. ಈ ಪ್ರಕರಣದಲ್ಲಿ ಪ್ರತಿಪಕ್ಷಗಳನ್ನೇ ಗುರಿಯಾಗಿಸಿ ತಿರುಗೇಟು ನೀಡಲು ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರ ಸಿದ್ಧವಾಗಿದೆ. ಪ್ರಕರಣ ಬಯಲಿಗೆಳೆದಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದು, ಆರೋಪ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸಿಬಿಐ, ಇಡಿಗೆ ಮಾಹಿತಿ ನೀಡಿ ತನಿಖೆಗೆ ಶಿಫಾರಸ್ಸು ಮಾಡಿದ್ದು ಸೇರಿದಂತೆ ತಮ್ಮ ಸರ್ಕಾರದ ಅವದಿಯಲ್ಲಿ ಕೈಗೊಂಡ ಕ್ರಮಗಳ ಸಮಗ್ರ ವಿವರಗಳನ್ನು ಚರ್ಚೆಯ ವೇಳೆ ಸದನಕ್ಕೆ ನೀಡಲು ನಿರ್ಧರಿಸಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಸಿಎಂ ಈಗಾಗಲೇ ಸೂಚನೆ ನೀಡಿದ್ದು, ಬಿಟ್ ಕಾಯಿನ್ ಪ್ರಕರಣದಲ್ಲಿ ಇಂಚಿಂಚೂ ಮಾಹಿತಿಯನ್ನು ಸದನದಲ್ಲಿ ಪ್ರಸ್ತಾಪಿಸಿ ಪ್ರತಿ ಪಕ್ಷಗಳ ಆರೋಪಕ್ಕೆ ತಕ್ಕ ಉತ್ತರ ನೀಡಿ ಸರ್ಕಾರವನ್ನು ಸಮರ್ಥಿಸಿಕೊಳ್ಳಬೇಕು. ಹಾಗೆಯೇ ಸಚಿವರು ಶಾಸಕರು ಗೃಹ ಸಚಿವರ ನೆರವಿಗೆ ನಿಲ್ಲಬೇಕು ಎಂದು ಸಿಎಂ ಸೂಚನೆ ಕೊಟ್ಟಿದ್ದಾರೆ.

ಶೇ.40 ರ ಕಮೀಷನ್ ಆರೋಪ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ರಾಷ್ಟ್ರಮಟ್ಟದಲ್ಲಿ ಮುಜುಗರವನ್ನುಂಟು ಮಾಡಿದ ಪ್ರಕರಣ ಕಮೀಷನ್ ದಂಧೆ ಆರೋಪ ಪ್ರಕರಣದ್ದು. ಎನ್​ಒಸಿ ತೆಗೆದುಕೊಳ್ಳುವುದಕ್ಕೆ 10 ರಿಂದ 12 ಪರ್ಸೆಂಟ್, ಕೆಲಸ ತೆಗೆದುಕೊಳ್ಳುವುದಕ್ಕೆ 15ರಿಂದ 20 ಪರ್ಸೆಂಟ್ ಒಟ್ಟಾರೆ 40 ಪರ್ಸೆಂಟ್ ವರೆಗೆ ಹಣವನ್ನು ಕಮಿಷನ್ ರೂಪದಲ್ಲಿ ಕೊಡಬೇಕಿದೆ ಎನ್ನುವ ಆರೋಪವನ್ನು ಬಿಜೆಪಿ ಸರ್ಕಾರದ ಮೇಲೆ ಹೊರಿಸಲಾಗಿದೆ. ಈ ಆರೋಪದ ಟಾರ್ಗೆಟ್ ಪ್ರಮುಖವಾಗಿ ಜಲಸಂಪನ್ಮೂಲ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಮೇಲೆ ಬಂದಿದ್ದು, ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ ಪಾಟೀಲ್ ಸದನದಲ್ಲಿ ಈ ಆರೋಪಗಳ ಚರ್ಚೆಗೆ ಉತ್ತರ ನೀಡಬೇಕಿದೆ. ಈಗಾಗಲೇ ಕಮಿಷನ್ ಬಂದೇ ಪ್ರಕರಣದ ತನಿಖೆಗೆ ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದು, ತನಿಖೆಯ ಪ್ರಗತಿಯ ವಿವರಗಳನ್ನು ಕೂಡ ಸದನದಲ್ಲಿ ವಿವರಿಸುವ ಸಾಧ್ಯತೆಯಿದೆ. ಈ ಮೂಲಕ ಸರ್ಕಾರ ಪಾರದರ್ಶಕವಾಗಿದೆ ಎಂದು ಸಮರ್ಥಿಸಿಕೊಳ್ಳಲು ಸಚಿವರು ಮುಂದಾಗಲಿದ್ದಾರೆ ಎನ್ನಲಾಗಿದೆ.

ಮಳೆ ಹಾನಿ ಪರಿಹಾರ ವೈಫಲ್ಯ : ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ 35 ಸಾವಿರಕ್ಕೂ ಹೆಚ್ಚಿನ ಮನೆಗಳಿಗೆ ಹಾನಿಯಾಗಿದ್ದು, ಈ ಸಂಬಂಧ 204 ಕೋಟಿ ರೂ. ಪರಿಹಾರ ಬಿಡುಗಡೆಗೆ ಆದೇಶಿಸಲಾಗಿದೆ. ಸಂಪೂರ್ಣ ಮನೆ ಹಾನಿಯಾಗಿದ್ದರೆ ಮನೆಗಳ ಮರು ನಿರ್ಮಾಣಕ್ಕಾಗಿ ಐದು ಲಕ್ಷ ರೂ.ಗಳ ಪರಿಹಾರ, ಬಾಗಶಃ ಹಾನಿಗೊಳಗಾದ ಮನೆಗಳಿಗೆ ದುರಸ್ತಿಗಾಗಿ ಒಂದು ಲಕ್ಷ ರೂ. ಪರಿಹಾರ ಹಾಗೂ ಮಳೆಯಿಂದ ಸಣ್ಣಪುಟ್ಟ ದುರಸ್ತಿ ಮಾಡಿಸಿಕೊಳ್ಳಲು ತಕ್ಷಣವೇ ಹತ್ತು ಸಾವಿರ ರೂ.ಗಳ ಪರಿಹಾರ ನೀಡಲು ಸರ್ಕಾರ ಆದೇಶ ಮಾಡಿದ್ದು, ಈ ಸಂಬಂಧ ಅಂಕಿ-ಅಂಶಗಳನ್ನು ಸದನದಲ್ಲಿ ಮಂಡಿಸಲಿದೆ. ವಿಪತ್ತು ನಿರ್ವಹಣೆ ಕಾಯ್ದೆ ಅಡಿಯಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುವ ವಿವರಗಳನ್ನು ಕಂದಾಯ ಸಚಿವ ಆರ್.ಅಶೋಕ್ ಸದನಕ್ಕೆ ನೀಡಲಿದ್ದು, ಬೆಳೆಹಾನಿ ಸಂಬಂಧ ಸಮಗ್ರ ಮಾಹಿತಿಯನ್ನು ಒದಗಿಸಲಿದ್ದಾರೆ. ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾಗಿ ಆಗಿರುವ ಬೆಳೆ ಹಾನಿಯ ಅಂದಾಜು ಪಟ್ಟಿ ಹಾಗೂ ಕೇಂದ್ರ ಸರ್ಕಾರಕ್ಕೆ ನೆರವು ಕೋರಿ ಸಲ್ಲಿಸಲಿರುವ ಬೇಡಿಕೆ ಸಂಬಂಧ ಸಮಗ್ರ ಮಾಹಿತಿಯನ್ನು ತಿಳಿಸಿ ಪ್ರತಿಪಕ್ಷಗಳ ಟೀಕೆಗೆ ತಕ್ಕ ಉತ್ತರ ನೀಡಲು ಸಜ್ಜಾಗಿದ್ದಾರೆ.

ಮತಾಂತರ ತಡೆಗೆ ಹೊಸ ಕಾಯ್ದೆ : ಇತ್ತೀಚೆಗೆ ರಾಜ್ಯದಲ್ಲಿ ಮತಾಂತರ ವಿಷಯ ಸಾಕಷ್ಟು‌ ಚರ್ಚಿತ ವಿಷಯವಾಗಿದೆ.‌ ಶಾಸಕ ಗೂಳಿಹಟ್ಟಿ ಶೇಖರ್ ಅವರ ತಾಯಿಯೇ ಮತಾಂತರಗೊಂಡಿದ್ದ ವಿಷಯವನ್ನು ಸ್ವತಃ ಶಾಸಕರೇ ತಿಳಿಸಿ ಮತಾಂತರದ ಬಗೆಗೆ ನೋವು ತೋಡಿಕೊಂಡು ಕಣ್ಣೀರು ಸುರಿಸಿದ್ದರು. ನಂತರದ ದಿನಗಳಲ್ಲಿ ಬಲವಂತದ ಮತಾಂತರದ ವಿರುದ್ಧ ಹಿಂದೂಪರ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಚಿಂತನೆ ನಡೆಸಿದ್ದು, ಕರಡು ಸಿದ್ಧಪಡಿಸಿಕೊಂಡಿದೆ. ಬೆಳಗಾವಿಯಲ್ಲೇ ಸಚಿವ ಸಂಪುಟ ನಡೆಸಿ ಸದನದಲ್ಲಿ ಕಾಯ್ದೆ ಮಂಡಿಸುವ ಕುರಿತು ನಿರ್ಧಾರ ಮಾಡಲಾಗುತ್ತದೆ. ಈಗಾಗಲೇ ಪ್ರತಿಪಕ್ಷಗಳು ಮತಾಂತರ ನಿಷೇಧ ಕಾಯ್ದೆಗೆ ಬಹಿರಂಗವಾಗಿ ವ್ಯಾಪಕ ವಿರೋಧ ವ್ಯಕ್ತಪಡಿಸಿವೆ ಹಾಗಾಗಿ ಈ ಬಿಲ್ ಮಂಡನೆಯಾದಲ್ಲಿ ಸಾಕಷ್ಟು ಮಾತಿನ ಚಕಮಕಿ ನಡೆಯಲಿದೆ. ಟೀಕೆ ಎದುರಾಗಲಿದೆ. ಇದನ್ನೆಲ್ಲಾ ಎದುರಿಸಲು ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗ್ತಿದೆ.

ಕೊರೊನಾ ನಿರ್ವಹಣೆ : ರಾಜ್ಯಕ್ಕೆ ಒಮಿಕ್ರಾನ್ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಕೊರೊನಾ ನಿರ್ವಹಣೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮ, ರೂಪಾಂತರಿ ಪ್ರಬೇಧ ಒಮಿಕ್ರಾನ್ ಎದುರಿಸಲು ಮಾಡುಕೊಂಡಿರುವ ಸಿದ್ಧತೆಗಳ ಕುರಿತು ಸದನದಲ್ಲಿ ಚರ್ಚೆ ನಡೆಯಲಿದೆ. ಈ ಸಂಬಂಧ ಅಗತ್ಯ ಬೆಡ್ ವ್ಯವಸ್ಥೆ, ಲಸಿಕೆಗಳು, ಔಷಧ ದಾಸ್ತಾನು, ಆಮ್ಲಜನಕ ಪೂರೈಕೆ, ಐಸಿಯು ಸಂಖ್ಯೆ, ಚಿಕಿತ್ಸಾ ವಿಧಾನ ಸೇರಿದಂತೆ
ಆರೋಗ್ಯ ಇಲಾಖೆಯಿಂದ ಕೈಗೊಂಡಿರುವ ಎಲ್ಲ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಆರೋಗ್ಯ ಸಚಿವ ಸುಧಾಕರ್ ಸದನಕ್ಕೆ ಮಾಹಿತಿ ನೀಡಲಿದ್ದಾರೆ. ವಿದೇಶದಿಂದ ಬರುವವರ ನಿಗಾ ವ್ಯವಸ್ಥೆ, ಸಾಂಸ್ಥಿಕ ಕ್ಯಾರಂಟೈನ್ , ಹೋಂ ಕ್ವಾರಂಟೈನ್ ವ್ಯವಸ್ಥೆ, ಕೋವಿಡ್ ಪರೀಕ್ಷೆ, ಲಸಿಕೆ ನೀಡಿಕೆ ಹಾಗು ಗಡಿಗಳಲ್ಲಿನ ಭದ್ರತೆ ಕುರಿತು ಮಾಹಿತಿ ನೀಡಲಿದ್ದಾರೆ.

ಕೃಷ್ಣಾ ಯೋಜನೆ, ಮೇಕೆದಾಟು ಅಣೆಕಟ್ಟು ಯೋಜನೆ : ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಭೂಸ್ವಾಧೀನ ಪರಿಹಾರ ಪಾವತಿಗೆ 2500 ಕೋಟಿ ರೂ. ಬಿಡುಗಡೆಗೆ ಕ್ರಮ, ಹಳ್ಳಿಗಳ ಸ್ಥಳಾಂತರ, ಪುನರ್ವಸತಿ ಸೇರಿದಂತೆ ಯೋಜನೆಯ ಪ್ರಗತಿ ವರದಿ ಬಗ್ಗೆ ಸದನದಲ್ಲಿ ನಡೆಯುವ ಚರ್ಚೆಗೆ ಅಗತ್ಯ ಉತ್ತರ ಒದಗಿಸುವ ಮೂಲಕ ಉತ್ತರ ಕರ್ನಾಟಕ ನೀರಾವರಿ ಯೋಜನೆಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎನ್ನುವ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಲು ಸರ್ಕಾರ ಸಜ್ಜಾಗಿದೆ. ಅದೇ ರೀತಿ ಮೇಕೆದಾಟು ಯೋಜನೆ ಕುರಿತು ಸದನದಲ್ಲಿ ಪ್ರಸ್ತಾಪವಾದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಸಿಗುವವರೆಗೂ ತಮಿಳುನಾಡಿನ ನದಿ ಜೋಡನೆ ಯೋಜನೆಗೆ ಮುಂದಿನ ಹಂತದ ಮಂಜೂರಾತಿ ನೀಡದಂತೆ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಿರುವ ಮಾಹಿತಿ ನೀಡಿ ರಾಜ್ಯದ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಲಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ : ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಎರಿಕೆ ವಿಷಯ ಪ್ರಮುಖವಾಗಿ ಚರ್ಚೆಯಾಗುವ ಸಾಧ್ಯತೆ ಇದ್ದು, ಇದಕ್ಕೆ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ವಿವರಣೆ ನೀಡಲಾಗುತ್ತದೆ. ವಿಶೇಷವಾಗಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿಮೆ ಮಾಡಿರುವ ವಿಷಯವನ್ನೇ ಹೆಚ್ಚಾಗಿ ಪ್ರಸ್ತಾಪಿಸಿ ಸರ್ಕಾರವನ್ನು ಸಮರ್ಥನೆ ಮಾಡಿಕೊಳ್ಳಲಾಗುತ್ತದೆ ಎನ್ನಲಾಗ್ತಿದೆ.

ರಾಷ್ಟ್ರೀಯ ಶಿಕ್ಷಣ ನೀತಿ : ದೇಶದಲ್ಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದೆ. ಈ ನೀತಿಗೆ ಈಗಾಗಲೇ ಕಾಂಗ್ರೆಸ್, ಜೆಡಿಎಸ್ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದು, ಶಿಕ್ಷಣದ ಕೇಸರೀಕರಣ ಮಾಡಲಾಗುತ್ತಿದೆ ಎಂದು ಆಪಾದಿಸಿವೆ. ಹಾಗಾಗಿ ಕುರಿತು ಸರ್ಕಾರ ವಿವರಣೆ ನೀಡಲಿದ್ದು, ನೂತನ ನೀತಿಯಿಂದ ಆಗುವ ಅನುಕೂಲಗಳ ಬಗ್ಗೆ ವಿವರದೊಂದಿಗೆ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.

ರೈತ ಕಾಯ್ದೆಗಳು : ಎಪಿಎಂಸಿ ಸೇರಿದಂತೆ ರೈತರಿಗೆ ಸಂಬಂಧಿಸಿದ ಮೂರು ಬಿಲ್ ಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. ಈಗ ಈ ಬಿಲ್ ಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆಯುತ್ತಾ ಎನ್ನುವ ಸ್ಪಷ್ಟತೆ ಇಲ್ಲ. ಹಾಗಾಗಿ ಈ ವಿಚಾರದ ಕುರಿತು ಸದನದಲ್ಲಿ ಚರ್ಚೆ ನಡೆಯಲಿದ್ದು, ಬಿಲ್ ವಾಪಸ್ ಗೆ ಪ್ರತಿಪಕ್ಷಗಳು ಆಗ್ರಹಿಸಲಿವೆ. ಈ ವಿಚಾರದಲ್ಲಿ ಸರ್ಕಾರ ಯಾವ ಹೆಜ್ಜೆ ಇರಿಸಲಿದೆ ಎನ್ನುವುದು ಸದ್ಯಕ್ಕೆ ನಿಗೂಢವಾಗಿದೆ.

ಒಟ್ಟಿನಲ್ಲಿ ಹತ್ತು ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷವನ್ನು ಅಣಿಯಲು ಪ್ರತಿ ಪಕ್ಷಗಳು ಸಿದ್ಧತೆ ಮಾಡಿಕೊಂಡಿದ್ದು, ಪ್ರತಿ ಪಕ್ಷಗಳಿಗೆ ತಿರುಗೇಟು ನೀಡಲು ಆಡಳಿತ ಪಕ್ಷವೂ ಸಿದ್ಧವಾಗಿದೆ. ನಾಳೆಯಿಂದ ಆರಂಭಗೊಳ್ಳಲಿರುವ ಚಳಗಾಲದ ಅಧಿವೇಶನದಲ್ಲಿ ಅಡಳಿತ ಮತ್ತು ಪ್ರತಿ ಪಕ್ಷಗಳ ನಡುವೆ ಸಮರದ ರೀತಿಯ ಚರ್ಚೆ ಎದುರಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.