ETV Bharat / city

ಪೀರನವಾಡಿ ಸಮಸ್ಯೆ ಬಗೆಹರಿಸಿದ ವಿವೇಕರಾವ್​​ ಪಾಟೀಲ್​ಗೆ ಸನ್ಮಾನ

author img

By

Published : Sep 8, 2020, 11:16 AM IST

ಪೀರನವಾಡಿಯಲ್ಲಿ ಸಂಗೋಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ವಿಚಾರವಾಗಿ ಹಲವಾರು ರೀತಿಯ ಪ್ರತಿಭಟನೆ, ಗಲಾಟೆ ಆಯಿತು. ಇದನ್ನು ಬಗೆಹರಿಸಲು ಸಹಾಯ‌ ಮಾಡಿದ ವಿಧಾನ ಪರಿಷತ್ ಸದಸ್ಯ ವಿವೇಕರಾವ್​​ ಪಾಟೀಲ್ ಅವರನ್ನು ಜಿಲ್ಲಾ ಕುರುಬರ ಸಂಘ, ರಾಯಬಾಗ ತಾಲೂಕು ಕುರುಬರ ಸಂಘ ಹಾಗೂ ಪೀರನವಾಡಿ ಗ್ರಾಮದ ನಾಗರಿಕರಿಂದ ರಾಯಬಾಗದಲ್ಲಿ ಸನ್ಮಾನಿಸಲಾಯಿತು.

Vivekarava Patil who solved the Peranavadi problem
ಪೀರನವಾಡಿ ಸಮಸ್ಯೆ ಬಗೆಹರಿಸಿದ ವಿವೇಕರಾವ ಪಾಟೀಲರಿಗೆ ವಿವಿಧ ಕುರುಬ ಸಂಘಟನೆಗಳಿಂದ ಸನ್ಮಾನ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಪೀರನವಾಡಿಯಲ್ಲಿ ಸಂಗೋಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ವಿಚಾರವಾಗಿ ಹಲವಾರು ಭಾರೀ ವಿವಾದ ಸೃಷ್ಟಿಯಾಗಿತ್ತು. ಇದನ್ನು ಬಗೆಹರಿಸಲು ಸಹಾಯ‌ ಮಾಡಿದ ವಿಧಾನ ಪರಿಷತ್ ಸದಸ್ಯ ವಿವೇಕರಾವ್​​ ಪಾಟೀಲ್ ಅವರನ್ನು ಜಿಲ್ಲೆಯ ವಿವಿಧ ಕುರುಬರ ಸಂಘಗಳಿಂದ, ಗ್ರಾಮದ ನಾಗರಿಕರಿಂದ ರಾಯಬಾಗದಲ್ಲಿ ಸನ್ಮಾನಿಸಲಾಯಿತು.

ಪೀರನವಾಡಿ ಸಮಸ್ಯೆ ಬಗೆಹರಿಸಿದ ವಿವೇಕರಾವ್​​ ಪಾಟೀಲ್​​ಗೆ ಸನ್ಮಾನ

ಸತ್ಕಾರ ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ್ ಮಾತನಾಡಿ, ಪೀರನವಾಡಿಯಲ್ಲಿ ದೇಶಭಕ್ತ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಯಾರ ಮನಸ್ಸಿಗೂ ನೋಯಿಸದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು.

ಇನ್ನು ಮುಂದೆ ರಾಜ್ಯದಲ್ಲಿ ಅಥವಾ ದೇಶದ ಯಾವುದೇ ಭಾಗದಲ್ಲಿಯೂ ಕೂಡ ದೇಶಭಕ್ತ ಮಹಾಪುರುಷರ ಮೂರ್ತಿಗಳಿಗೆ ಧಕ್ಕೆ ಬರದಂತೆ ಸರ್ಕಾರ ಹಾಗೂ ನಾಗರಿಕರು ಗಮನ ವಹಿಸಬೇಕೆಂದು ಹೇಳಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.