ETV Bharat / city

2024ರಲ್ಲಿ ಯುಪಿಎ-3 ಸರ್ಕಾರ ತರಲು ತಂತ್ರಗಾರಿಕೆ ಮಾಡುತ್ತಿದ್ದೇವೆ: ವೀರಪ್ಪ ಮೊಯ್ಲಿ - ಮಾಜಿ ಸಿಎಂ ವೀರಪ್ಪ ಮೊಯ್ಲಿ

2024ರಲ್ಲಿ 7 ವಿಧಾನಸಭಾ ಚುನಾವಣೆ ಮತ್ತು ಕೇಂದ್ರಕ್ಕೆ ಚುನಾವಣೆ ಬರಲಿದೆ. ಕಾಂಗ್ರೆಸ್​ ಇದಕ್ಕೆ ತಕ್ಕ ಯೋಜನೆಗಳನ್ನು ರೂಪಿಸುತ್ತಿದೆ ಎಂದು ವೀರಪ್ಪ ಮೊಯ್ಲಿ ಹೇಳಿದರು.

Veerappa Moily reaction on 2023 Karnataka election
ಮಾಜಿ ಸಿಎಂ ವೀರಪ್ಪ ಮೊಯ್ಲಿ
author img

By

Published : Apr 20, 2022, 9:39 PM IST

ಬೆಳಗಾವಿ: 2024ರಲ್ಲಿ ಯುಪಿಎಯಿಂದ 3 ಸರ್ಕಾರ ತರಲು ತಂತ್ರಗಾರಿಕೆ ಮಾಡುತ್ತಿದ್ದೇವೆ. ಚುನಾವಣೆಯನ್ನು ಯಾವ ರೀತಿ ಎದುರಿಸಬೇಕು, ಏನೇನು ತಂತ್ರ ಮಾಡಬೇಕು ಎಂಬ ಬಗ್ಗೆ ಇಂದಲ್ಲ ನಾಳೆ ತಿಳಿಯುತ್ತದೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು.

2024ರಲ್ಲಿ ಯುಪಿಎ-3 ಸರ್ಕಾರ ತರಲು ತಂತ್ರಗಾರಿಕೆ ಮಾಡ್ತಿದ್ದೇವೆ; ಮಾಜಿ ಸಿಎಂ ವೀರಪ್ಪ ಮೊಯ್ಲಿ

ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1977ರಲ್ಲಿ ಕಾಂಗ್ರೆಸ್ ಸೋತಿತ್ತು, 1980ರಲ್ಲಿ 353 ಸೀಟ್ ಗೆದ್ದು ಸರ್ಕಾರ ರಚಿಸಿತ್ತು. ಈ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿದೆ. ಹೀಗಾಗಿ ಕಾಂಗ್ರೆಸ್‌ ಪುನಶ್ಚೇತನ ಮಾಡುವ ಕೆಲಸ ಮಾಡಬೇಕು ಎಂದರು.

ಕರ್ನಾಟಕದಲ್ಲಿ ಬಿಜೆಪಿ ಮಾಡುವ ಪ್ರಯತ್ನಕ್ಕೆ ಪ್ರತಿತಂತ್ರ ರೂಪಿಸುವ ಅವಶ್ಯಕತೆ ಇದೆ. ಇದರ ಬಗ್ಗೆ ನಾವು ವಿಚಾರ ಮಾಡ್ತಿದ್ದೇವೆ. ಕೇಂದ್ರದಲ್ಲಿ ಪ್ರಶಾಂತ್​ ಕಿಶೋರ್​ ಜೊತೆ ಮಾತುಕತೆ ಆಗಿದೆ. ಪಕ್ಷದಲ್ಲೇ ಇದ್ದು ಸಲಹೆ ನೀಡಲಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ತಂತ್ರಗಾರಿಕೆ ನಡೆಯಲ್ಲ, ಅಷ್ಟು ಸುಲಭ ಅಲ್ಲ. 2023ರಲ್ಲಿ ರಾಜ್ಯದಲ್ಲಿ ಹಾಗೂ 2024ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿ ಯಾವಾಗಲೂ ಪೂರ್ಣ ಅಧಿಕಾರ ಬಂದಿಲ್ಲ, ಹೈಜಾಕ್ ಮಾಡಿದೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್​ಗೆ 'ಪಿಕೆ' ಪೂರ್ಣಕಾಲದ ಮ್ಯಾನೇಜರ್ ಅಥವಾ ಸಲಹೆಗಾರ?: ಸಭೆಗಳ ಮೇಲೆ ಸಭೆ ನಡೆಸುತ್ತಿರುವ ಸೋನಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.