ETV Bharat / city

ನೋಟಿಸ್​​​​ ಲೆಟರ್​ ಅಲ್ಲ, ಅದು ಲವ್​​ ಲೆಟರ್​​ ಅಷ್ಟೇ.. ಯತ್ನಾಳರನ್ನ ​ ಸರ್ಮರ್ಥಿಸಿಕೊಂಡ ಕತ್ತಿ, ಜಾರಕಿಹೊಳಿ - ‌ಸಚಿವ ಉಮೇಶ್ ‌ಕತ್ತಿ

ಸಮಾಜದ ಬಗ್ಗೆ ಮಾತನಾಡೋದು ತಪ್ಪಲ್ಲ, ಇತಿಮಿತಿಯಲ್ಲಿ ಮಾತನಾಡಿ ಅಂತ ಅವರಿಗೆ ಮನವಿ ಮಾಡುತ್ತೇವೆ. ಬಸವಗೌಡ ಅವರು ಹಿರಿಯ ಶಾಸಕರು. ಯತ್ನಾಳ್ ಒಳ್ಳೆಯ ಮಿತ್ರ, ಅವರಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ. ಸಮಾಜಕ್ಕಾಗಿ ಹೋರಾಟ ಮಾಡಲಿ ತಪ್ಪೇನು ಎಂದು ಸಮರ್ಥಿಸಿಕೊಂಡರು.

umesh-katti-ramesh-jarkiholi-clarification-on-basavanagouda-yatnal-notice
ಕತ್ತಿ ಜಾರಕಿಹೊಳಿ
author img

By

Published : Feb 13, 2021, 4:27 PM IST

Updated : Feb 13, 2021, 4:36 PM IST

ಬೆಳಗಾವಿ: ಶಾಸಕ ಬಸವನಗೌಡ ಪಾಟೀಲ್​ ಯತ್ನಾಳ್​ ಅವರಿಗೆ ಬಿಜೆಪಿ​​ ಶಿಸ್ತು ಸಮಿತಿ ನೋಟಿಸ್​ ನೀಡಿದ ಹಿನ್ನೆಲೆ ಯತ್ನಾಳ್​​ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿಲ್ಲ ಎಂದು ಯತ್ನಾಳ ಪರ ಸಚಿವ ಉಮೇಶ್​ ಕತ್ತಿ ಹಾಗೂ ರಮೇಶ್ ಜಾರಕಿಹೊಳಿ‌ ಸಮರ್ಥಿಸಿಕೊಂಡಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ರಮೇಶ್, ಯತ್ನಾಳ್ ಪಕ್ಷ ವಿರೋಧಿ ಚಟುವಟಿಕೆ ಮಾಡ್ತಿಲ್ಲ. ಅವರು ನನ್ನ ಸ್ನೇಹಿತರು, ನಾನು ತಿಳಿಸಿ ಹೇಳುತ್ತೇವೆ. ಸಮಾಜದ ಬಗ್ಗೆ ಮಾತನಾಡೋದು ತಪ್ಪಲ್ಲ, ಇತಿಮಿತಿಯಲ್ಲಿ ಮಾತನಾಡಿ ಅಂತ ಅವರಿಗೆ ಮನವಿ ಮಾಡ್ತೀವಿ. ಬಸವಗೌಡ ಅವರು ಹಿರಿಯ ಶಾಸಕರು. ಯತ್ನಾಳ್ ಒಳ್ಳೆಯ ಮಿತ್ರ, ಅವರಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ. ಸಮಾಜಕ್ಕಾಗಿ ಹೋರಾಟ ಮಾಡಲಿ ತಪ್ಪೇನು ಎಂದು ಸಮರ್ಥಿಸಿಕೊಂಡರು.

ಯತ್ನಾಳನ್ನ​ ಸರ್ಮರ್ಥಿಸಿಕೊಂಡ ಕತ್ತಿ, ಜಾರಕಿಹೊಳಿ

ಯತ್ನಾಳ ಅವರಿಗೆ ಪಕ್ಷದಿಂದ ಲವ್​​ ಲೆಟರ್​​​​ ಬಂದಿದೆ

‌ಸಚಿವ ಉಮೇಶ್ ‌ಕತ್ತಿ ಮಾತನಾಡಿ, ರಮೇಶ್ ಜಾರಕಿಹೊಳಿ‌, ಯತ್ನಾಳ್​ ನಾವೆಲ್ಲರೂ ಸ್ನೇಹಿತರೇ. ಹೊರಗಿನವರು ಯಾರೂ ಇಲ್ಲ. ಪಕ್ಷದಿಂದ ಯತ್ನಾಳಗೆ ಬಂದಿರುವುದು ನೋಟಿಸ್ ಅಲ್ಲ, ಲವ್ ಲೆಟರ್. ಲವ್ ಲೆಟರ್ ಬೇಡ ಅಂದ್ರೂ ಬರುತ್ತಿರುತ್ತೇವೆ. ಯತ್ನಾಳ ಪಕ್ಷದ ವಿರೋಧ ಕೆಲಸ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಅನ್ಯಾಯ ಆದ್ರೆ ಪ್ರತಿಭಟಿಸುವೆ: ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಆದಾಗ ಪ್ರತಿಭಟನೆ ಮಾಡುತ್ತೇನೆ. ಸಚಿವನಾಗಿದ್ದರೂ ನಾನೇನು ಪ್ರತಿಭಟನೆ ಮಾಡುವುದನ್ನು ಬಿಡುವುದಿಲ್ಲ. ಯಾರೋ ಹೇಳಿದರೂ ಅಂತಲ್ಲ, ಅನ್ಯಾಯ ಆದ್ರೇ ಪ್ರತಿಭಟಿಸುತ್ತೇನೆ. ನಮ್ಮ ಸರ್ಕಾರ ಬಡ ವರ್ಗದ ಜನರಿಗೆ ಅನ್ನ ನೀಡುತ್ತಿದೆ. ಅಕ್ಕಿ ಕಡಿತ ಮಾಡುತ್ತಿಲ್ಲ, ಅಕ್ಕಿ ಕಡಿತದ ಜತೆಗೆ ಜೋಳ, ರಾಗಿ ಕೊಡುತ್ತಿದ್ದೇವೆ. ಜನರು ಇಷ್ಟ ಪಟ್ರೆ ಮುಂದುವರೆಸುತ್ತೇವೆ. ಇಲ್ಲವಾದ್ರೆ ಮರಳಿ ಅಕ್ಕಿಯನ್ನೇ ಕೊಡುತ್ತೇವೆ ಎಂದು ಸಚಿವ ಕತ್ತಿ ಹೇಳಿದರು.

ಸಿದ್ದರಾಮಯ್ಯಗೆ ತಿರುಗೇಟು: ಸಿದ್ದರಾಮಯ್ಯ ಪಕ್ಷಾತೀತವಾಗಿ ಅಹಿಂದ ಹೋರಾಟ ಮಾಡಿದ್ರೆ ನಾವು ಹೋಗುತ್ತೇವೆ. ಅವರು ನಡೆಸುತ್ತಿರುವುದು ಕಾಂಗ್ರೆಸ್ ಅಹಿಂದವೋ ಅಥವಾ ಆಲ್ ಪಾರ್ಟಿ ಅಹಿಂದವೋ ಅಂತ ಕೇಳಿ. ನಂತರ ಉತ್ತರಿಸುವೆ. ಈ ವೇಳೆ, ಸಚಿವ ಉಮೇಶ್ ಕತ್ತಿ ಮಧ್ಯಪ್ರವೇಶಿಸಿ ಹಿಂದು ಇಲ್ಲ ಮುಂದು ಇಲ್ಲ. ಅಹಿಂದ ಹೋಗಿ ಹಿಂದ ಆಗೇತಿ. ಮುಂದ ಯಾವುದು ಆಗುತ್ತೆ ನೋಡೋಣ. ಸಿದ್ದರಾಮಯ್ಯ ಕನ್ಫ್ಯೂಷನ್‌ನಲ್ಲಿದ್ದಾರೆ. ಅಹಿಂದ, ಹಿಂದ ಬಗ್ಗೆ ಕ್ಲಿಯರ್ ಇಲ್ಲ. ಕ್ಲಿಯರ್ ಮಾಡಿಕೊಂಡು ಬರಲಿ ಉತ್ತರ ನೀಡುತ್ತೇವೆ ಎಂದು ಸಚಿವ ಜಾರಕಿಹೊಳಿ ತಿರುಗೇಟು ನೀಡಿದರು.

Last Updated : Feb 13, 2021, 4:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.