ETV Bharat / city

ತಬ್ಲಿಘಿ ಬಳಿಕ ಅಜ್ಮೀರ್ ಯಾತ್ರಿಕರಿಂದ ಹರಡಿದ ಕೊರೊನಾ: ಬೆಳಗಾವಿಯಲ್ಲಿ ಶತಕ ಬಾರಿಸಿದ ಸೋಂಕು - ಕೋವಿಡ್ 19

ಅಜ್ಮೀರ್​ ಯಾತ್ರೆ ಕೈಗೊಂಡಿದ್ದವರು ಬೆಳಗಾವಿ ಜಿಲ್ಲೆಗೆ ವಾಪಸ್ಸಾಗಿದ್ದು ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲು ಕಾರಣವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಶತಕ ದಾಟಿದೆ.

corona
ಕೊರೊನಾ
author img

By

Published : May 10, 2020, 2:18 PM IST

ಬೆಳಗಾವಿ: ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಶತಕ ದಾಟಿದೆ. ತಬ್ಲಿಘ್​ ಜಮಾತ್​ ನಂತರ ಅಜ್ಮೀರಕ್ಕೆ ಪ್ರವಾಸ ಕೈಗೊಂಡಿದ್ದ ಯಾತ್ರಿಕರು ಜಿಲ್ಲೆಗೆ ಶಾಕ್​ ನೀಡಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ.

ಅಜ್ಮೀರ್ ಪ್ರವಾಸ ಕೈಗೊಂಡಿದ್ದ ಒಟ್ಟು 35 ಯಾತ್ರಿಗಳ ಪೈಕಿ 22 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಎಲ್ಲರನ್ನೂ ಅಜ್ಮೀರ್​ನಲ್ಲಿ ಕ್ವಾರಂಟೈನ್​ ಮಾಡಲಾಗಿತ್ತು. ಲಾಕ್​ಡೌನ್​ ಸಡಿಲಿಕೆ ಆದ ಬಳಿಕ ಎಲ್ಲರೂ ಜಿಲ್ಲೆಗೆ ಮರಳಿದ್ದರು. ಇವರೆಲ್ಲರನ್ನೂ ನಿಪ್ಪಾಣಿಯ ಸಮೀಪದ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಕ್ವಾರಂಟೈನ್​ ಮಾಡ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿತ್ತು.

ಸೋಂಕು ಪತ್ತೆ ಪರೀಕ್ಷೆ ಬಳಿಕ ಒಟ್ಟ 22 ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ. ಸೋಂಕಿತರನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ. ಇಲ್ಲಿನ ಕೋವಿಡ್ ವಾರ್ಡ್​​​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದಕ್ಕೂ ಮೊದಲು ತಬ್ಲಿಘ್​ ಜಮಾತ್​ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಹಾಗೂ ಅವರ ಸಂಪರ್ಕಿತರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದ್ದು, ಈಗ ಅಜ್ಮೀರ್ ಯಾತ್ರಿಗಳು ತಲೆನೋವಾಗಿ ಪರಿಣಮಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.