ETV Bharat / city

ಮುರಗೋಡ ಡಿಸಿಸಿ ಬ್ಯಾಂಕ್ ಶಾಖೆಗೆ ಕನ್ನ: 4.41 ಕೋಟಿ ನಗದು, 1.5 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ - bank theft

ಬೆಳಗಾವಿ ‌ಡಿಸಿಸಿ ಬ್ಯಾಂಕಿನ ಮುರಗೋಡ ಶಾಖೆಯಲ್ಲಿ ಭಾರಿ ಪ್ರಮಾಣದ ಕಳ್ಳತನ ನಡೆದಿದೆ.

theft in Muragoda branch of belagavi dcc bank
ಬೆಳಗಾವಿ ಡಿಸಿಸಿ ಬ್ಯಾಂಕ್ ಮುರಗೋಡ ಶಾಖೆಗೆ ಕನ್ನ
author img

By

Published : Mar 6, 2022, 1:41 PM IST

Updated : Mar 6, 2022, 1:46 PM IST

ಬೆಳಗಾವಿ: ಬೆಳಗಾವಿ ‌ಡಿಸಿಸಿ ಬ್ಯಾಂಕಿನ ಮುರಗೋಡ ಶಾಖೆಗೆ ಕನ್ನ ಹಾಕಿರುವ ಕಳ್ಳರು ನಗದು, ಚಿನ್ನ ಸೇರಿ 6 ಕೋಟಿ ಮೌಲ್ಯದ ವಸ್ತುಗಳನ್ನು ‌ಎಗರಿಸಿ ಪರಾರಿಯಾದ ಘಟನೆ ನಿನ್ನೆ ರಾತ್ರಿ ನಡೆದಿದೆ. ರಾತ್ರಿ ಬೀಗ ಮುರಿದು ಕಳ್ಳರು ಈ‌ ಕೃತ್ಯ ಎಸಗಿದ್ದಾರೆ.

4 ಕೋಟಿ 41 ಲಕ್ಷ ರೂಪಾಯಿ ನಗದು, 1.5 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿವೆ. ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಹಾಗೂ ಮುರಗೋಡ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಭಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ₹25 ಲಕ್ಷದ ಚೆಕ್​ ಹಸ್ತಾಂತರಿಸಿದ ಬಿಎಸ್​​ವೈ

ರಾಜ್ಯದ ಜಿಲ್ಲಾ ಸಹಕಾರ ಬ್ಯಾಂಕ್​ಗಳ ಪೈಕಿ ಬೆಳಗಾವಿ ‌ಡಿಸಿಸಿ ಬ್ಯಾಂಕ್ ‌ಅತಿ ಹೆಚ್ಚು ಲಾಭದಲ್ಲಿದೆ. ನೂರು ವರ್ಷ ಪೂರೈಸಿರುವ ಈ ಬ್ಯಾಂಕ್ ಜಿಲ್ಲೆಯಲ್ಲಿ ‌100 ಶಾಖೆಗಳಿವೆ. ರೈತರ ಪಾಲಿನ‌ ಆಶಾಕಿರಣವಾಗಿರುವ ಈ ಬ್ಯಾಂಕ್ ಠೇವಣಿ ಸಂಗ್ರಹ ಹಾಗೂ‌ ಚಿನ್ನದ ಮೇಲೂ ಸಾಲ ನೀಡುತ್ತಿದೆ. ಠೇವಣಿ ಇಟ್ಟಿದ್ದ 4 ಕೋಟಿ 41 ಲಕ್ಷ ರೂಪಾಯಿ ನಗದು, ಅಡವಿಟ್ಟಿದ್ದ 1.5 ಕೋಟಿ ಮೌಲ್ಯದ ಚಿನ್ನಾಭರಣಗಳೀಗ ಕಳ್ಳತನವಾಗಿದೆ‌.

Last Updated : Mar 6, 2022, 1:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.