ETV Bharat / city

ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯದಿದ್ರೆ ಅಧಿವೇಶನದ ವೇಳೆ ಸುವರ್ಣಸೌಧಕ್ಕೆ ಮುತ್ತಿಗೆ: ಕೋಡಿಹಳ್ಳಿ ಎಚ್ಚರಿಕೆ

author img

By

Published : Dec 2, 2021, 8:20 PM IST

ಕೇಂದ್ರ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆದಿದೆ. ಆದರೆ ರಾಜ್ಯ ಸರ್ಕಾರ ಈ ಕುರಿತು ಒಂದು ಮಾತನಾಡಿಲ್ಲ. ಈ ಹಿನ್ನೆಲೆ ಚಳಿಗಾಲ ಅಧಿವೇಶನ ಪ್ರಾರಂಭದ ಮೊದಲ ದಿನ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

Kodihalli
ಕೋಡಿಹಳ್ಳಿ

ಬೆಳಗಾವಿ: ರಾಜ್ಯ ಸರ್ಕಾರದ ‌ರೈತವಿರೋಧಿ ನೀತಿ ಖಂಡಿಸಿ ಡಿ.13 ರಂದು ಆರಂಭವಾಗಲಿರುವ ಚಳಿಗಾಲ ಅಧಿವೇಶನದ ಮೊದಲ ದಿನವೇ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರೈತನಾಯಕ ಕೋಡಿಹಳ್ಳಿ ಚಂದ್ರಶೇಖರ ಎಚ್ಚರಿಕೆ ನೀಡಿದರು.

ಸರ್ಕಾರಕ್ಕೆ ಕೋಡಿಹಳ್ಳಿ ಮುತ್ತಿಗೆ ಎಚ್ಚರಿಕೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತವಿರೋಧಿ ಕಾನೂನುಗಳನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ ಆದರೆ, ರಾಜ್ಯ ಸರ್ಕಾರದ ನಿಲುವೇನು? ಕರಾಮತ್ತೇನು? ಹಕ್ಕಿಕತ್ತೇನು? ಎಂಬುದು ನಮಗೆ ಗೊತ್ತಾಗಬೇಕಿದೆ. ರಾಜ್ಯ ಸರ್ಕಾರ ರೈತವಿರೋಧಿ ಧೋರಣೆ ಮುಂದೆವರೆಸಲಿದೆಯೇ? ಬೊಮ್ಮಾಯಿ ಸರ್ಕಾರ ರೈತವಿರೋಧಿ ಕಾನೂನುಗಳನ್ನು ಗೌರವದಿಂದ ಹಿಂಪಡೆಯಬೇಕಿತ್ತು. ರಾಜ್ಯ ಸರ್ಕಾರವೂ ಕಾನೂನು ಹಿಂಪಡೆಯುವ ಬಗ್ಗೆ ಘೋಷಣೆ ಮಾಡಬೇಕಿತ್ತು.

ಇದನ್ನು ಓದಿ-ಒಮಿಕ್ರೋನ್ ಸೋಂಕಿತನ ಸಂಪರ್ಕದಲ್ಲಿದ್ದ ಐವರಿಗೆ ಕೋವಿಡ್​​..ರೂಪಾಂತರಿ ತಗುಲಿರುವ ಆತಂಕ

1961ರ ಭೂಸುಧಾರಣಾ, ಕೃಷಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಭೂಸ್ವಾಧೀನ ಕಾಯ್ದೆ ತಿದ್ದುಪಡಿ, ಗೋಹತ್ಯೆ ಸೇರಿ ರೈತವಿರೋಧಿ ಕಾನೂನು ಹಿಂಪಡೆಯಬೇಕು. ಇಲ್ಲವಾದರೆ ಡಿಸೆಂಬರ್ 13ರಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಆ ವೇಳೆ ಆಗುವ ಗಲಾಟೆ, ಇತರ ಪರಿಣಾಮಗಳಿಗೆ ಸರ್ಕಾರವೇ ಹೊಣೆ ಆಗಬೇಕಾಗುತ್ತದೆ. ರಾಜ್ಯದ ಮೂಲೆ ಮೂಲೆಗಳಿಂದ ರೈತರು ಬರಲಿದ್ದಾರೆ. ದೊಡ್ಡ ಪ್ರಮಾಣದಲ್ಲಿ ನಾವು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದರು.

ಈ ಭಾಗದ ಕಬ್ಬು ಬೆಳೆಗಾರರಿಗೆ ಎಸ್​ಎಪಿ ಕೊಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕೇವಲ ಎಫ್​ಆರ್​ಪಿ ಬಗ್ಗೆ ಮಾತ್ರ ಎಲ್ಲರೂ ಮಾತನಾಡುತ್ತಿದ್ದಾರೆ. ಕನಿಷ್ಠ ಬೆಳೆ ಪರಿಹಾರ ಈ ಭಾಗದ ರೈತಾಪಿ ವರ್ಗಕ್ಕೆ ದಕ್ಕುತ್ತಿಲ್ಲ. ಅಧಿಕಾರಿಗಳು - ರಾಜಕಾರಣಿಗಳ ಸಂಬಳ ಕಾಲಕ್ಕೆ ತಕ್ಕಂತೆ ಹೆಚ್ಚಾಗುತ್ತಿದೆ. ರೈತರಿಗೆ ಕೊಡಲು ಹಿಂದೆ - ಮುಂದೆ ನೋಡುತ್ತಿರುವುದೇಕೆ. ಮುಖ್ಯಮಂತ್ರಿಗಳು ವೈಜ್ಞಾನಿಕ ಮಾರ್ಗದಂಡಗಳನ್ನು ರೂಪಿಸಬೇಕು. ಅಧಿವೇಶನದಲ್ಲಿ ಮೊದಲ ದಿನ‌ ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ ಹೋರಾಟದ ರೂಪುರೇಷೆ ನಂತರವೇ ರೂಪಿಸುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.