ETV Bharat / city

ಮೌಢ್ಯತೆ ದೇಶಕ್ಕೆ ಮಾರಕ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ - ಮೌಢ್ಯತೆ ದೇಶಕ್ಕೆ ಮಾರಕ

ದೇಶದಲ್ಲಿರುವ ಅನಿಷ್ಟ ಪದ್ಧತಿಗಳನ್ನು ಬೇರು ಸಮೇತ ಕಿತ್ತೆಸೆಯಲು ಸರ್ಕಾರ ಮುಂದಾಗಬೇಕು. ವಿದೇಶಗಳಲ್ಲಿ ಇಂತಹ ಮೌಢ್ಯ ಆಚರಣೆಗಳು ಇಲ್ಲ ನಮ್ಮ ಭಾರತದಲ್ಲಿ ಮಾತ್ರ ಇಂತಹ ಆಚರಣೆಗಳು ಇವೆ. ಇವುಗಳನ್ನು ನಿರ್ಮೂಲನೆ ಮಾಡಬೇಕು ಎಂದು ಸತೀಶ್​ ಜಾರಕಿಹೊಳಿ ಹೇಳಿದ್ದಾರೆ.

KPCC working president Sathish Jarakiholi talked to press
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
author img

By

Published : May 28, 2022, 8:04 PM IST

ಬೆಳಗಾವಿ: ರಾಮನಗರ ತಾಲೂಕಿನ ದೇವರದೊಡ್ಡಿ ಗ್ರಾಮದ ಹೊರವಲಯದ ಪ್ರದೇಶದಲ್ಲಿ ಮೌಢ್ಯತೆಯ ಅನಾವರಣವಾಗಿರುವುದು ಖಂಡನೀಯವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಗೋಕಾಕ್​​ ನಗರದ ಹಿಲ್‌ ಗಾರ್ಡನ್​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವರದೊಡ್ಡಿ ಗ್ರಾಮದಲ್ಲಿ ತಲೆಮಾರುಗಳಿಂದಲೂ ಋತುಮತಿಯಾದವರು, ಬಾಣಂತಿಯರನ್ನು ಊರ ಹೊರಗಿಟ್ಟು ಮೌಢ್ಯತೆ ಪರಮಾವಧಿ ಮೀರಿರುವುದು ವಿಷಾದಕರವಾಗಿದೆ.

ಬೇರೆ ದೇಶಗಳಲ್ಲಿ ಇಂತಹ ಮೌಢ್ಯ ಆಚರಣೆಗಳು ಇಲ್ಲ, ಕೇವಲ ಭಾರತದಲ್ಲಿ ಇವೆ. ಇಂತಹ ಮೌಢ್ಯತೆ ತೊಲಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇಂತಹ ಮೌಢ್ಯ ಆಚರಣೆಗೆ ಕುಮ್ಮಕ್ಕು ನೀಡುವವರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಎಚ್ಚರಿಕೆ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೌಢ್ಯ ತೆಗದುಹಾಕಲು ಮಹಾನ್​ ನಾಯಕರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಈಗ ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ನಡೆದಿವೆ. ಸರ್ಕಾರ ಇಂತಹ ಪ್ರಕರಣಗಳತ್ತ ಹೆಚ್ಚು ಗಮನ ಹರಿಸಿ ಕಡಿವಾಣ ಹಾಕಲು ಮುಂದಾಗಬೇಕು ಎಂದರು.

ವಿದೇಶಗಳಲ್ಲಿ ಮೌಢ್ಯತೆ ಇಲ್ಲ. ದೇಶದಲ್ಲಿ ಅನಿಷ್ಟ ಪದ್ದತಿ ಇರುವುದು ಸಮಾಜಕ್ಕೆ ಮಾರಕವಾಗಿದೆ. ಇಂತಹ ಪದ್ಧತಿಯನ್ನು ಬೇರು ಸಹಿತ ಕಿತ್ತಸೆಯಲು ಸರ್ಕಾರ ಮುಂದಾಗಬೇಕು. ಮಾಢ್ಯವೆಂಬ ಅನಿಷ್ಟ ಪದ್ದತಿ ಹರಡಲು ಮನುವಾದಗಳು ಮಾಡಿದ ಕುತಂತ್ರವಾಗಿದೆ ಎಂದು ಆರೋಪಿಸಿದರು.

ಅನಿಷ್ಟ ಪದ್ದತಿ ನಿರ್ಮೂಲನೆಗೆ ಸರ್ಕಾರ ವಿಫಲ: ರಾಜ್ಯದಲ್ಲಿ ಮೌಢ್ಯ ಪದ್ದತಿ ಇನ್ನು ಜೀವಂತವಿದ್ದು, ಈ ಅನಿಷ್ಟ ಪದ್ದತಿ ಹೋಗಲಾಡಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಮನಗರ ತಾಲೂಕಿನ ದೇವರದೊಡ್ಡಿ ಗ್ರಾಮದಲ್ಲಿ ನಡೆದಂತಹ ಅನಿಷ್ಟ ಪದ್ಧತಿ ಮುಂದೆ ದೇಶ ಹಾಗೂ ರಾಜ್ಯದಲ್ಲಿ ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಮೌಢ್ಯತೆಯ ಪರಮಾವಧಿ : ಹಸುಗೂಸು, ಬಾಣಂತಿಯ ಗ್ರಾಮದಿಂದ ಹೊರಗಿಟ್ಟ ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.