ಬೆಳಗಾವಿ: ಮನೆ ಮುಂದೆ ಆಟ ಆಡುತಿದ್ದ ನಾಲ್ವರು ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ.
ಬೆಳಗಾವಿಯ ಗಾಂಧಿನಗರ ಮತ್ತು ಮನ್ನತ ಕಾಲನಿಯಲ್ಲಿ ಏಕಕಾಲದಲ್ಲಿ ಬೀದಿನಾಯಿಗಳು ಮಕ್ಕಳ ಮೇಲೆ ದಾಳಿ ಮಾಡಿವೆ.
ಮಕ್ಕಳ ಮುಖ, ಕೈ, ಕಾಲುಗಳಿಗೆ ನಾಯಿಗಳು ಕಚ್ಚಿದ್ದು ಗಾಯಗೊಂಡ ಮೂವರು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗಂಭೀರವಾಗಿ ಗಾಯಗೊಂಡ ಒಂದು ಮಗು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾನವಾಜ್ (3), ಫೈಜಾನ್ (5) ಹಾಗೂ ಆದೀಬಾ ಸೈಯದ್ (11) ಗಾಯಗೊಂಡ ಮಕ್ಕಳು.
ಬೀದಿ ನಾಯಿಗಳ ಅಟ್ಟಹಾಸ ಪೋಷಕರಲ್ಲಿ ಆತಂಕ ಮೂಡಿಸಿವೆ. ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.