ಚಿಕ್ಕೋಡಿ : ಉಪ ಖಜಾನೆ ಕಚೇರಿಗೆ ರಾಜ್ಯ ಹಣಕಾಸು ಇಲಾಖೆ ಆಯುಕ್ತ ಡಾ. ಡಿ.ಎಸ್ ರವೀಂದ್ರನ್ ಅನಿರೀಕ್ಷಿತವಾಗಿ ಭೇಟಿ ನೀಡಿ, ಕಚೇರಿ ಕಡತಗಳನ್ನು ಪರಿಶೀಲಿಸಿ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದರು.
ಕಚೇರಿಯ ಅವ್ಯವಸ್ಥೆಯಿಂದ ಸೊಳ್ಳೆಗಳ ಕಾಟ ಆಯುಕ್ತರಿಗೆ ಬಿಸಿ ಮುಟ್ಟಿಸಿತು. ಕೂಡಲೇ ಅಧಿಕಾರಿಗಳು ಸೋಳ್ಳೆ ಬತ್ತಿ ಹಚ್ಚಿ ಸೊಳ್ಳೆಗಳ ಓಡಿಸಲು ಪ್ರಯತ್ನಿಸಿದರು. ಹಾಗು ಕಚೇರಿ ಆವರಣದ ಅಸ್ವಚ್ಚತೆ ಮತ್ತು ಶಿಥಿಲಗೊಂಡ ಗೋಡೆಗಳನ್ನು ದುರಸ್ತಿ ಮಾಡಲು ಕ್ರಮ ಜರುಗಿಸಬೇಕೆಂದು ಜಿಲ್ಲಾ ಖಜಾನೆ ಅಧಿಕಾರಿ ಸುರೇಶ್ ಹಲ್ಯಾಳ ಅವರಿಗೆ ತಿಳಿಸಿದರು.
ಪಿಂಚಣಿದಾರರ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಪಡೆದು ತಕ್ಷಣ ಅಪ್ಲೋಡ್ ಮಾಡಬೇಕು. ಯಾರು ಪಿಂಚಣಿ ಹಣಕ್ಕಾಗಿ ಖಜಾನೆಗೆ ಬರಬಾರದು, ನೇರವಾಗಿ ಪ್ರತಿ ತಿಂಗಳು ಅವರ ಖಾತೆಗಳಿಗೆ ಹಣ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು .ಸರ್ಕಾರದ ನಿಯಮಾನುಸಾರ K 2 ಮಾದರಿಯಲ್ಲಿ ಹಣ ಸಂದಾಯವಾಗಬೇಕು ಎಂದು ತಾಲೂಕು ಟ್ರೇಜರಿ ಅಧಿಕಾರಿ ಪಿ.ಎಲ್ ಮುಸೇನ್ನ ಅವರಿಗೆ ಸೂಚಿಸಿದರು.