ETV Bharat / city

ಮತಾಂತರ ನಿಷೇಧ ಕಾಯ್ದೆಯನ್ನ ಕೆಲ ಕಾಂಗ್ರೆಸಿಗರೂ ಸ್ವಾಗತ ಮಾಡ್ತಿದ್ದಾರೆ:  ಯಡಿಯೂರಪ್ಪ - ಮತಾಂತರ ನಿಷೇಧ ಕಾಯ್ದೆಗೆ ಕಾಂಗ್ರೆಸ್‌ನ ಕೆಲವರಿಂದ ಬೆಂಬಲ

ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತಿರುವುದು ಕಾಂಗ್ರೆಸ್‌ನ ಕೆಲವರಿಗೆ ಇಷ್ಟವಿದ್ದು, ಸ್ವಾಗತ ಮಾಡ್ತಾ ಇದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಬೆಳಗಾವಿಯಲ್ಲಿ ತಿಳಿಸಿದ್ದಾರೆ.

Some congressmen welcome the conversion ban Bill: Yediyurappa
ಮತಾಂತರ ನಿಷೇಧ ಕಾಯ್ದೆ ಜಾರಿ ನಿರ್ಧಾರಕ್ಕೆ ಕೆಲ ಕಾಂಗ್ರೆಸಿಗರಿಂದ ಸ್ವಾಗತ: ಮಾಜಿ ಸಿಎಂ ಯಡಿಯೂರಪ್ಪ
author img

By

Published : Dec 13, 2021, 2:30 PM IST

ಬೆಳಗಾವಿ: ಮತಾಂತರ ನಿಷೇಧ ವಿಧೇಯಕವನ್ನು ಈ ಅಧಿವೇಶನದಲ್ಲೇ ಮಂಡಿಸಲಿದ್ದೇವೆ. ಬಿಜೆಪಿ ತರುವ ಮಸೂದೆಗಳನ್ನು ವಿರೋಧ ಮಾಡೋದೇ ಸಿದ್ದರಾಮಯ್ಯ ಅವರ ಸ್ವಭಾವ ಎಂದು ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಇದೇ ವೇಳೆ ಕಿಡಿ ಕಾರಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ಜಾರಿಯನ್ನ ಕೆಲ ಕಾಂಗ್ರೆಸಿಗರು ಸ್ವಾಗತ ಮಾಡ್ತಿದ್ದಾರೆ: ಮಾಜಿ ಸಿಎಂ ಯಡಿಯೂರಪ್ಪ

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಅನಗತ್ಯವಾಗಿ ವಿರೋಧ ಮಾಡದೇ ಕಾಂಗ್ರೆಸ್ ಸಹಕಾರ ಕೊಡಬೇಕು. ಈ ಕಾಯ್ದೆ ಬಗ್ಗೆ ಚರ್ಚೆ ಮಾಡಲಿ. ಬೇರೆ ಬೇರೆ ರಾಜ್ಯಗಳಲ್ಲಿಯೂ ಈ ಕಾಯ್ದೆ ಇದೆ. ನಮ್ಮ ರಾಜ್ಯದಲ್ಲೂ ತರುತ್ತೇವೆ. ಇಂತಹ ಕಾಯ್ದೆಗಳಿಗೆ ಸಿದ್ದರಾಮಯ್ಯ ವಿರೋಧ ಮಾಡುತ್ತಲೇ ಇರ್ತಾರೆ. ಕಾಂಗ್ರೆಸ್‌ನ ಕೆಲವರಿಗೆ ಈ ಕಾಯ್ದೆ ತರುವುದು ಇಷ್ಟವಿದ್ದು, ಸ್ವಾಗತ ಮಾಡ್ತಾ ಇದ್ದಾರೆ ಎಂದರು.

ಇದೇ ವೇಳೆ, ಲವ್ ಜಿಹಾದ್ ನಿಷೇಧ ಕಾಯ್ದೆ ಬಗ್ಗೆ ಸಚಿವ ಸುನಿಲ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಅವರು ಹೇಳಿದ್ದು ಸರಿ ಇದೆ. ಇತರ ರಾಜ್ಯಗಳಲ್ಲೂ ಈ ಕಾಯ್ದೆ ಜಾರಿಯಲ್ಲಿದೆ. ರಾಜ್ಯದಲ್ಲೂ ಕಾನೂನು ತರಲು ಯತ್ನಿಸುತ್ತೇವೆ ಎಂದರು.

ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ರಾಜಕೀಯ ದುರುದ್ದೇಶಪೂರಿತ.. ಅದಕ್ಕೆ ನಮ್ಮ ವಿರೋಧವಿದೆ - ಸಿದ್ದರಾಮಯ್ಯ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.