ETV Bharat / city

2023ಕ್ಕೆ ಮತ್ತೆ ನಾವು ಅಧಿಕಾರಕ್ಕೆ ಬಂದ್ರೆ 7ಕೆಜಿ ಅಲ್ಲ, ತಲಾ 10ಕೆಜಿ ಅಕ್ಕಿ ಕೊಡುತ್ತೇವೆ ; ಸಿದ್ದರಾಮಯ್ಯ - ಸಿದ್ದರಾಮಯ್ಯ ಹೇಳಿಕೆ

ಪ್ರಸ್ತುತ ಆಡಳಿತ ನಡೆಸುತ್ತಿರುವ ಸರ್ಕಾರ ಜನರಿಗೆ ಏನು ಕೊಟ್ಟಿದೆ?. ನಾನು ಅಧಿಕಾರಕ್ಕೆ ಬಂದಾಗ ಅದೆಷ್ಟು ಭಾಗ್ಯ ಯೋಜನೆಗೆಳನ್ನು ರೋಪಿಸಿದ್ದೇನೆ. 2023ರಲ್ಲಿ ಮತ್ತೆ ಜನತೆ ಅವಕಾಶ ಕೊಟ್ಟರೆ 7ಕೆಜಿ ಅಲ್ಲಾ, ತಲಾ 10ಕೆಜಿ ಅಕ್ಕಿ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು..

Sangolli Rayanna statue in belagavi
ವಿಪಕ್ಷ ನಾಯಕ ಸಿದ್ದರಾಮಯ್ಯ
author img

By

Published : May 8, 2022, 6:40 PM IST

ಬೆಳಗಾವಿ : ಬಸವಣ್ಣನವ ಜಯಂತಿ ದಿನ ಪ್ರಮಾಣ ವಚನ ಸ್ವೀಕರಿಸಿ ಜನರ ಭರವಸೆ ಈಡೇರಿಸಿದ್ದೇನೆ. ಸಾಕಷ್ಟು ಭಾಗ್ಯಗಳನ್ನು ಕೊಟ್ಟಿದ್ದೇನೆ. 2023ಕ್ಕೆ ಮತ್ತೆ ನಾವು ಅಧಿಕಾರಕ್ಕೆ ಬಂದರೆ 7ಕೆಜಿ ಅಲ್ಲ, ತಲಾ 10ಕೆಜಿ ಅಕ್ಕಿ ಕೊಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ರಾಮದುರ್ಗದಲ್ಲಿ ತಾಲೂಕಿನ ಅವರಾದಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ ಮಾಡಿದ ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನು ಬಹಳ ಸಂತೋಷದಿಂದ ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣ ಮಾಡಿದ್ದೇನೆ.

ಸಂಗೊಳ್ಳಿ ರಾಯಣ್ಣ ಅವರಿಗೆ ದೇಶಪ್ರೇಮ‌ ನಾಡಿನ ಪ್ರೇಮ ಇತ್ತು. ಹೀಗಾಗಿ, ಅವರು ದೇಶಕ್ಕಾಗಿ ಹೋರಾಟ ಮಾಡಿದ್ದಾರೆ. ನಾವೆಲ್ಲರೂ ದೇಶಭಕ್ತಿ ಬೆಳೆಸಿಕೊಳ್ಳಬೇಕು. ದೇಶಕ್ಕೆ ಏನಾರ ಕೊಡುಗೆ ನೀಡಬೇಕು ಎಂದರು.

2023ಕ್ಕೆ ಮತ್ತೆ ನಾವು ಅಧಿಕಾರಕ್ಕೆ ಬಂದ್ರೆ 7ಕೆಜಿ ಅಲ್ಲಾ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ..

ಕರ್ನಾಟಕದಲ್ಲಿ ಪಿಎಸ್ಐ ನೇಮಕಾತಿಯಲ್ಲಿ 300 ಕೋಟಿ ಹೊಡಿದಿದ್ದಾರೆ. ಇಂತಹ ಬಿಜೆಪಿ ಸರ್ಕಾರ ಇರಬೇಕಾ?. ಯಾವ ಕಾರಣಕ್ಕೂ ಇರಬಾರದು. ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ. ಇದನ್ನು ಬೇರು ಸಹಿತ ಕಿತ್ತು ಒಗೆಯಬೇಕು. ಹೀಗಾಗಿ, 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಒಳ್ಳೆಯ ನಿರ್ಧಾರ ಮಾಡಿ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ವಿಧಾನಸೌಧದಲ್ಲಿ ಡಿಸಿಗಳ ಜೊತೆ ಸಿಎಂ ಸಭೆ : ಜಿಲ್ಲಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಕ್ಲಾಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.