ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಪ್ರತಿಮೆ ತೆರವು ವಿಚಾರವಾಗಿ ಶಿವಸೇನೆ ಮತ್ತೆ ಕ್ಯಾತೆ ತೆಗೆದು ಪ್ರತಿಭಟನೆಗೆ ಮುಂದಾಗಿದೆ. ಅಲ್ಲದೆ, ಕರ್ನಾಟಕ ಗಡಿ ಪ್ರವೇಶಕ್ಕೆ ಶಿವಸೇನೆಯ ಕಾರ್ಯಕರ್ತರು ಯತ್ನಿಸಿದ್ದಾರೆ.
ಮಣಗುತ್ತಿ ಗ್ರಾಮದಲ್ಲಿ ಶಿವಾಜಿ 5 ಮೂರ್ತಿ ಪ್ರತಿಷ್ಠಾಪಿಸುವ ವಿಚಾರವಾಗಿ ಶಿವಸೇನೆ ಮುಖಂಡ ವಿಜಯ್ ಶಾಮರಾವ್ ದೇವನೆ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಮಹಾರಾಷ್ಟ್ರದ ಗಡಿ ಭಾಗ ಕವಳಿಕಟ್ಟಿ ಗ್ರಾಮದಲ್ಲಿ ಪ್ರತಿಭಟನೆ ಮಾಡುತ್ತಿರುವ ಶಿವಸೇಸೆಯ ಸುಮಾರು 80 ಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಇದನ್ನು ಓದಿ-ಶಿವಾಜಿ ಪುತ್ಥಳಿ ಸ್ಥಳಾಂತರ: ಶಿವಸೇನೆ ಮಾತು ಕೇಳಿ ಮರಾಠಿಗರಿಂದ ಪ್ರತಿಭಟನೆ
ಕರ್ನಾಟಕ-ಮಹಾರಾಷ್ಟ್ರದ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಎಷ್ಟೇ ಹೇಳಿದರೂ ಸಹ ಬುದ್ಧಿ ಕಲಿಯದ ಶಿವಸೇನೆ, ಸದ್ಯ ಮಣಗುತ್ತಿ ಗ್ರಾಮಸ್ಥರು ಸುಮ್ಮನಿದ್ದರೂ ಸಹ ಕಾಲ್ಕೆರೆದು ಜಗಳಕ್ಕೆ ಬರುತ್ತಿದೆ. ಸದ್ಯ ಕರ್ನಾಟಕ ಪ್ರವೇಶಿಸದಂತೆ ಶಿವಸೇನೆ ಕಾರ್ಯಕರ್ತರಿಗೆ ರಾಜ್ಯ ಪೊಲೀಸರಿಂದ ತಡೆ ಹಿಡಿದಿದ್ದಾರೆ.
ಇದನ್ನು ಓದಿ-ಕೊನೆಗೊಂಡ ಮಣಗುತ್ತಿ ಶಿವಾಜಿ ಪ್ರತಿಮೆ ಪ್ರಕರಣ: ಮರು ಪ್ರತಿಷ್ಠಾಪನೆಗೆ ನಿರ್ಧಾರ...
ಘಟನೆ ಹಿನ್ನೆಲೆ
ಸುಮಾರು 15 ದಿನಗಳ ಹಿಂದೆ ಮಣಗುತ್ತಿ ಗ್ರಾಮಸ್ಥರು ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಆದ್ರೆ ಆ ಜಾಗ 3 ಮೂರು ಗ್ರಾಮಗಳಿಗೆ ಸೇರಿದ್ದಾಗಿತ್ತು. ಇದರಿಂದಾಗಿ ವಿವಿಧ ಸಂಘಟನೆ ಮತ್ತು ಧರ್ಮದವರು ವಿರೋಧ ವ್ಯಕ್ತಪಡಿದ್ದರು. ನಂತರ ಸಭೆ ನಡೆಸಿ ಐದು ಮೂರ್ತಿಗಳನ್ನು ಪ್ರತಿಷ್ಠಾಪನೆ ತೀರ್ಮಾನ ಮಾಡಿದ್ದರು. ಆದ್ರೆ 15 ದಿನಗಳಾದರೂ ಮೂರ್ತಿ ಪ್ರತಿಷ್ಠಾಪನೆಯಾಗಿಲ್ಲ ಅಂತ ಸದ್ಯ ಶಿವಸೇನೆ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತಿದೆ.