ETV Bharat / city

ಡಿಕೆಶಿ ಗಡ್ಡದ ಬಗ್ಗೆ ಶೆಟ್ಟರ್​​​​ ಹೇಳಿದ್ದೇನು? - ಡಿ.ಕೆ.ಶಿವಕುಮಾರ್, ಹೆಚ್.ಡಿ‌.ಕುಮಾರಸ್ವಾಮಿ, ಸಿದ್ದರಾಮಯ್ಯ

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಜೈಲಿನಿಂದ ಹೊರಬಂದ ಬಳಿಕ ಗಡ್ಡ ಬಿಟ್ಟು ಪ್ರವಾಸ ಕೈಗೊಂಡಿದ್ದಾರೆ ಎಂದು ಕೈಗಾರಿಕಾ ಸಚಿವ ಜಗದೀಶ್​ ಶೆಟ್ಟರ್​​ ವ್ಯಂಗ್ಯವಾಡಿದ್ದಾರೆ.

Minister of Large and Medium Scale Industries excluding Sugar of Karnataka
Jagadish Shettar
author img

By

Published : Nov 28, 2019, 7:06 PM IST

ಚಿಕ್ಕೋಡಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಜೈಲಿನಿಂದ ಹೊರಬಂದ ಬಳಿಕ ಗಡ್ಡ ಬಿಟ್ಟು ಪ್ರವಾಸ ಕೈಗೊಂಡಿದ್ದಾರೆ. ಅದೇನೋ ಯುದ್ಧ ಗೆದ್ದಂತೆ ಹೊರಟಿದ್ದಾರೆ ಎಂದು ಕೈಗಾರಿಕಾ ಸಚಿವ ಜಗದೀಶ್​ ಶೆಟ್ಟರ್​​ ವ್ಯಂಗ್ಯವಾಡಿದ್ದಾರೆ.

ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ಗಡ್ಡ ನೋಡಿ ನನಗೆ ವಿಚಿತ್ರ ಅನಿಸುತ್ತಿದೆ ಎಂದು ನಕ್ಕ ಶೆಟ್ಟರ್, ಬರೀ ಜಾಮೀನು ಸಿಕ್ಕಿದ್ದಕ್ಕೆ ವಿಜಯೋತ್ಸವ ಮಾಡುತ್ತಿದ್ದಾರೆ. ಇನ್ನೂ ಯಾವುದೇ ಪ್ರಕರಣ ಖುಲಾಸೆ ಆಗಿಲ್ಲ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಕೈಗಾರಿಕಾ ಸಚಿವ ಜಗದೀಶ್​ ಶೆಟ್ಟರ್

ಮೊನ್ನೆ ಹುಬ್ಬಳ್ಳಿಗೆ ಬಂದಾಗ ವಿಜಯೋತ್ಸವ ಮಾಡಿದ್ದಾರೆ. ಯಾವ ಲೋಕದಲ್ಲಿ ಇದ್ದಾರೆ ಗೊತ್ತಿಲ್ಲ. ರಾಜಕೀಯದಲ್ಲಿ ಯಾವುದೇ ಅಲ್ಲೋಲ ಕಲ್ಲೋಲ ಆಗಲ್ಲ. ಈ ಚುನಾವಣೆ ನಂತರ ಬಿಜೆಪಿ ಇನ್ನೂ ಗಟ್ಟಿಮುಟ್ಟಾಗುತ್ತದೆ. ಡಿ.ಕೆ.ಶಿವಕುಮಾರ್, ಹೆಚ್.ಡಿ‌.ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಬಿಜೆಪಿ ಅಧಿಕಾರದಿಂದ ಕೆಳಗಿಯುತ್ತದೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Intro:ಡಿ.ಕೆ ಶಿವಕುಮಾರ್ ಗಡ್ಡದ ಬಗ್ಗೆ ವ್ಯಂಗ್ಯವಾಡಿದ ಶೆಟ್ಟರ್
Body:
ಚಿಕ್ಕೋಡಿ :

ಡಿ.ಕೆ ಶಿವಕುಮಾರ್ ಜೈಲಿನಿಂದ ಹೊರಗಡೆ ಬಂದ ಮೇಲೆ ಗಡ್ಡ ಬಿಟ್ಟು ಪ್ರವಾಸ ಮಾಡಿಕೊಂಡ ಹೊರಟಿದ್ದಾರೆ, ಅದೇನೋ ಒಂದು ಯುದ್ದ ಗೆದ್ದಂತೆ ಹೊರಟಿದ್ದಾರೆ ಎಂದು ಸಚಿವ ಜಗದೀಶ ಶೆಟ್ಟರ ವ್ಯಂಗ್ಯವಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆ ಪ್ರಚಾರ ಕೆಂಪವಾಡ ಗ್ರಾಮದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಅವರ ಗಡ್ಡ ನೋಡಿ ನನಗೆ ವಿಚಿತ್ರ ಅನ್ಸುತ್ತೆದೆ ಎಂದು ನಕ್ಕ ಶೆಟ್ಟರ್,
ಬರಿ ಜಾಮೀನು ಸಿಕ್ಕಿದ್ದಕ್ಕೆ ವಿಜಯೋತ್ಸವ,
ಇನ್ನೂ ಯಾವುದೇ ಕೇಸ್ ಖುಲಾಸೆ ಆಗಿಲ್ಲ, ಆದಾಯ ತೆರಿಗೆ ಇಲಾಖೆ ಕೇಸ್,ಅಪರಾ ತಪ್ರಾ ಕೇಸ್ ನಡೆದಿವೆ.

ಮೊನ್ನೆ ಹುಬ್ಬಳ್ಳಿಗೆ ಬಂದಾಗ ವಿಜಯೋತ್ಸವ, ಯಾವ ಲೋಕದಲ್ಲಿ ಇದ್ದಾರೆ ಗೊತ್ತಿಲ್ಲ,
ರಾಜಕೀಯದಲ್ಲಿ ಯಾವುದೇ ಅಲ್ಲೊಳ ಕಲ್ಲೊಳ ಆಗಲ್ಲ ಏನು ಆಗಲ್ಲ. ಈ ಚುನಾವಣೆ ನಂತರ ಬಿಜೆಪಿ ಇನ್ನೂ ಗಟ್ಟಿಮುಟ್ಟಾಗುತ್ತೆದೆ,
ಡಿಕೆ ಶಿವಕುಮಾರ್, ಹೆಚ್ ಡಿ‌ ಕುಮಾರಸ್ವಾಮಿ, ಸಿದ್ದರಾಮಯ್ಯ ಎಲ್ಲರೂ ಭ್ರಮೆಯಲ್ಲಿದ್ದಾರೆ ಎಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.