ETV Bharat / city

ಗೋಮಾತೆಗೆ ಅದ್ಧೂರಿ ಸೀಮಂತ ಮಾಡಿದ ರೈತ: ಭರ್ಜರಿ ಊಟ ಸವಿದ ಗ್ರಾಮಸ್ಥರು

author img

By

Published : Jan 23, 2021, 5:08 PM IST

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ನಿವಾಸಿಯೊಬ್ಬರು ಅದ್ಧೂರಿಯಾಗಿ ಗೋಮಾತೆಯ ಸೀಮಂತ ಮಾಡಿದ್ದು, ಗ್ರಾಮಸ್ಥರಿಗೆ ಭರ್ಜರಿ ಊಟ ಹಾಕಿಸಿ ಸಂಭ್ರಮಿಸಿದ್ದಾರೆ.

ಗೋಮಾತೆ ಸೀಮಂತ ಕಾರ್ಯಕ್ರಮ
ಗೋಮಾತೆ ಸೀಮಂತ ಕಾರ್ಯಕ್ರಮ

ಚಿಕ್ಕೋಡಿ: ಯಾರ ಮನೆಯಲ್ಲಿ ಗೋಮಾತೆ ಇರುತ್ತೋ ಆ ಮನೆಯಲ್ಲಿ ನೆಮ್ಮದಿ, ಸುಖ, ಶಾಂತಿ ನೆಲೆಸಿರುತ್ತದೆ ಎಂಬುವುದು ವಾಡಿಕೆ. ಇಲ್ಲೊಬ್ಬ ರೈತ ಗೋಮಾತೆಗೆ ತನ್ನ ಮಗಳ ಸ್ಥಾನ ನೀಡಿ,‌ ಚೆಂದದ ಹೆಸರಿಡುವ ಜೊತೆಗೆ ಸೀಮಂತ ನೆರವೇರಿಸುವ ಮೂಲಕ ಗ್ರಾಮಸ್ಥರಿಗೆ ಅದ್ಧೂರಿ ಊಟ ಹಾಕಿಸಿ ಸಂಭ್ರಮಿಸಿದ್ದಾರೆ.

ಗೋಮಾತೆ ಸೀಮಂತ ಕಾರ್ಯಕ್ರಮ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ನಿವಾಸಿ ತುಕಾರಾಮ ಮಾಳಿ ಎಂಬುವರ ಕುಟುಂಬದಲ್ಲಿ ಕಳೆದ ಒಂದು ವರ್ಷದ ಹಿಂದೆ ಮನೆಯಲ್ಲಿ ಶಾಂತಿ ಇಲ್ಲದೇ ಚಿಕ್ಕಪುಟ್ಟ ವಿಷಯಕ್ಕೆ ಜಗಳವಾಗುತ್ತಿತ್ತಂತೆ. ಹಿರಿಯರು ಶಾಂತಿಗಾಗಿ‌ ಮನೆಯಲ್ಲಿ ಗೋವು ಸಾಕು ಎಂದಾಗ ತುಕಾರಾಮ ಅವರು ವರ್ಷದ ಹಿಂದೆ ಆಕಳನ್ನು ಖರೀದಿ ಮಾಡಿದ್ದಾರೆ. ಕ್ರಮೇಣ ಮನೆಯಲ್ಲಿ ನಡೆಯುತ್ತಿದ್ದ ಸಣ್ಣಪುಟ್ಟ ಜಗಳಗಳು ಬಂದ್ ಆಗುವ ಜೊತೆಗೆ ಆರ್ಥಿಕ ಸ್ಥಿತಿಗತಿ ಕೂಡ ಸುಧಾರಿಸಿದೆ. ಇದನ್ನೆಲ್ಲಾ ನೋಡಿದ ತುಕಾರಾಮ್, ಆಕಳನ್ನು ಮನೆ ಮಗಳಂತೆ ನೋಡಿಕೊಳ್ಳಲು ಆರಂಭಿಸಿದರು. ಅಷ್ಟೇ ಅಲ್ಲದೆ ಇದಕ್ಕೆ ಗೌರಿ ಅಂತಾ ಹೆಸರಿಟ್ಟು, ಪ್ರೀತಿಯಿಂದ ಸಾಕುತ್ತಿದ್ದಾರೆ.

ಮನೆಗೆ ನೆಮ್ಮದಿ ತಂದಿರುವ ಗೌರಿಗೆ ಅತ್ಯಂತ ವಿಜೃಂಭಣೆಯಿಂದ ಸೀಮಂತ ಮಾಡಿದ್ದಾರೆ. ಮನೆಯ ಮುಂದೆ ಶಾಮಿಯಾನ ಹಾಕಿ, ಮನೆ ಸಿಂಗರಿಸಿ ಹೆಣ್ಣು ಮಕ್ಕಳಿಗೆ ಸೀಮಂತ ನೆರವೇರಿಸುವ ಹಾಗೆಯೇ ಅದ್ಧೂರಿಯಾಗಿ ಇಂದು ಗೌರಿಗೆ ಸೀಮಂತ ಮಾಡಿದ್ದಾರೆ.

ಇನ್ನು ಸೀಮಂತ ಕಾರ್ಯಕ್ರಮಕ್ಕೆ ಎರಡು ದಿನದಿಂದ ತಯಾರಿ ಮಾಡಿಕೊಂಡಿದ್ದ ಕುಟುಂಬಸ್ಥರು, ಸಂಬಂಧಿಕರು ಹಾಗೂ ಇಡೀ ಗ್ರಾಮದ ಜನರನ್ನು ಆಹ್ವಾನಿಸಿದ್ದರು. ಬೆಳಗ್ಗೆ ಎಂಟು ಗಂಟೆಗೆ ಗೌರಿಯ ಮೈತೊಳೆದು ನಂತರ ಬಣ್ಣ ಬಳಿದು ಮಲ್ಲಿಗೆ, ಸೇವಂತಿ, ಚೆಂಡು ಹೂಗಳಿಂದ ಅಲಂಕಾರ ಮಾಡಿದ್ದಾರೆ. ಇದಾದ ಬಳಿಕ ಗೌರಿ ಕಣ್ಣಿಗೆ ಕಾಡಿಗೆ ಬಳಿದು, ಕೊರಳಲ್ಲಿ ಸೀರೆ ಹಾಕಿ, ಆರತಿ ಬೆಳಗುವ ಮೂಲಕ ಪೂಜೆ ಸಲ್ಲಿಸಿದ್ದಾರೆ. ಇತ್ತ ಬಗೆ ಬಗೆಯ ಅಡುಗೆ ಮಾಡಲಾಗಿದ್ದು, ಮೊದಲು ಗೌರಿಗೆ ಅದನ್ನು ತಿನ್ನಿಸಿ ನಂತರ ಸಂಬಂಧಿಕರು ಹಾಗೂ ಗ್ರಾಮಸ್ಥರಿಗೆ ಶಿರಾ, ಸಜ್ಜಿ ರೊಟ್ಟಿ, ಬದನೆಕಾಯಿ ಪಲ್ಯ, ಅನ್ನ, ಸಾಂಬಾರ್​ ಬಡಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.