ಬೆಳಗಾವಿ : ವಾತಾವರಣ ಶುದ್ಧಿಗಾಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಹೋಮ ಹವನ ನಡೆಸಿದ್ದರು. ಆದ್ರೆ, ಇದಕ್ಕೆ ಪ್ರತಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಹೋಮ, ಹವನ ನಡೆದ ಬಡಾವಣೆಗಳಲ್ಲಿ ಸ್ಯಾನಿಟೈಜರ್, ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ.
ಬೆಳಗಾವಿ ನಗರದ ಹೊಸೂರ, ಬಸವಣ್ಣಗಲ್ಲಿ, ಶಿವಾಜಿ ಗಾರ್ಡ್ ಸೇರಿದಂತೆ ಕೆಲವು ಕಡೆಗಳಲ್ಲಿ ವೀರ ಮದಕರಿ ಘರ್ಜನೆ ಸಂಘದ ಕಾರ್ಯಕರ್ತರು ಹಾಗೂ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಸ್ಯಾನಿಟೈಸೇಷನ್, ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆ ಬೆಳಗಾವಿಯಲ್ಲಿ ಒಂದೆಡೆ ಅಭಯ್ ಪಾಟೀಲ್‌ರಿಂದ ಹೋಮ ಹವನ ನಡೆಸುತ್ತಿದ್ರೆ, ಮತ್ತೊಂದೆಡೆ ಅದೇ ಪ್ರದೇಶದಲ್ಲಿ ಸತೀಶ್ ಅಭಿಮಾನಿಗಳಿಂದ ಸ್ಯಾನಿಟೈಸರ್, ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ. (ವಾತಾವರಣ ಶುದ್ಧಿಗೆ ಹೋಮ, ಹವನ ಮಾಡಿ ಮೂಢನಂಬಿಕೆ ಮೊರೆ ಹೋದ ಬಿಜೆಪಿ ಶಾಸಕ!?)
ದೇವರ ಹೆಸರಿನ ಮೇಲೆ ಹೋಮ ಹವನ ಮಾಡಿದ್ರೆ ಕೊರೊನಾ ಓಡಿ ಹೋಗೋದಿಲ್ಲ. ಹೀಗಾಗಿ, ಶಾಸಕ ಅಭಯ್ ಪಾಟೀಲ್ ಜನರಲ್ಲಿ ಮೂಢನಂಬಿಕೆ ಬಿತ್ತುವ ಬದಲು ಜನರಲ್ಲಿ ಕೊರೊನಾ ಜಾಗೃತಿ ಮೂಡಿಸಬೇಕಿದೆ ಎನ್ನುತ್ತಾರೆ ಸಾರ್ವಜನಿಕರು. (ಸೋಂಕು ತೊಲಗಲೆಂದು ನೂರಾರು ಕೆಜಿ ಮೊಸರನ್ನ ಚೆಲ್ಲಿದ ದಮ್ಮೂರು ಕಗ್ಗಲ್ ಗ್ರಾಮಸ್ಥರು)