ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನೀಲಜಿ ಗ್ರಾಮದ ಡೊಳ್ಳು ವಾದಕ ಸಂತೋಷ್ ನಿವರ್ಗಿ ಹಾಡಿದ ರಾಬರ್ಟ್ ಚಿತ್ರದ ತೆಲುಗು ಹಾಡು ಸಾಮಾಜಿಕ ಜಾಲತಾಣದಲ್ಲಿ ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಸಂತೋಷ್ ನಿವರ್ಗಿ ಕರ್ನಾಟಕ, ಮಹಾರಾಷ್ಟ್ರದ ಹಲವು ಭಾಗಗಳಲ್ಲಿ 200 ರಿಂದ 300 ಡೂಳ್ಳಿನ ಹಾಡು ಕಾರ್ಯಕ್ರಮಗಳನ್ನು ನೀಡಿ ಚಿರಪರಿಚಿತರಾಗಿದ್ದಾರೆ. ಆದರೂ ಕೂಡ ಅವರಿಗೆ ಅಷ್ಟೊಂದು ಪ್ರೋತ್ಸಾಹ ಮತ್ತು ಪ್ರಚಾರ ಸಿಕ್ಕಿರಲಿಲ್ಲ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ನಡೆದ ಶಿವರಾತ್ರಿ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಒತ್ತಾಯಕ್ಕೆ ತೆಲುಗಿನ ಮಂಗಲಿ ಹಾಡಿರುವ ರಾಬರ್ಟ್ ಚಲನಚಿತ್ರದ ಹಾಡನ್ನು ಹಾಡಿದ್ದು, ಜನಪ್ರಿಯತೆಗೆ ಕಾರಣವಾಗಿದೆ.