ETV Bharat / city

ಸಚಿವ ಈಶ್ವರಪ್ಪನವ್ರು ಅರೆಸ್ಟ್ ಆಗೋವರೆಗೂ ಸಂತೋಷ್​​​ನ ಅಂತ್ಯಕ್ರಿಯೆ ಮಾಡಲ್ಲ.. ಮೃತನ ಸೋದರ ಪ್ರಶಾಂತ್‌ - prashant patil on eshwarappa

ಸಂತೋಷ್​ನ ಸಾವಿಗೆ ಸಚಿವ ಕೆ.ಎಸ್ ಈಶ್ವರಪ್ಪ ನೇರ ಕಾರಣ. ಜೀವ ಬೆದರಿಕೆ ಕೂಡ ಹಾಕಿದ್ದರು ಎಂದು ಸೋದರ ಪ್ರಶಾಂತ್‌ ಪಾಟೀಲ ಆರೋಪಿಸಿದ್ದಾರೆ. ಹೀಗಾಗಿ, ಅವರನ್ನು ಬಂಧಿಸಬೇಕು, ಈಶ್ವರಪ್ಪ ಅರೆಸ್ಟ್ ಆಗೋವರೆಗೂ ಅಂತ್ಯಕ್ರಿಯೆ ಮಾಡೋದಿಲ್ಲ ಎಂದು ಮೃತರ ಸಹೋದರ ಪ್ರಶಾಂತ್ ಪಾಟೀಲ ತಿಳಿಸಿದ್ದಾರೆ..

santhosh brother prashant urging to arrest a minister eshwarappa
ಈಶ್ವರಪ್ಪರನ್ನು ಅರೆಸ್ಟ್ ಮಾಡುವಂತೆ ಪ್ರಶಾಂತ ಪಾಟೀಲ ಒತ್ತಾಯ
author img

By

Published : Apr 12, 2022, 5:03 PM IST

Updated : Apr 12, 2022, 6:21 PM IST

ಬೆಳಗಾವಿ : ಸಚಿವ ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಶ್ವರಪ್ಪ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದೀಗ ಸಚಿವ ಕೆ.ಎಸ್. ಈಶ್ವರಪ್ಪ ಅರೆಸ್ಟ್ ಆಗೋವರೆಗೂ ಅಂತ್ಯಕ್ರಿಯೆ ನಡೆಸೋದಿಲ್ಲ ಎಂದು ಮೃತರ ಸಹೋದರ ಪ್ರಶಾಂತ ಪಾಟೀಲ ತಿಳಿಸಿದ್ದಾರೆ.

ಮೃತ ಗುತ್ತಿಗೆದಾರ ಸಂತೋಷ್‌ ಸಹೋದರ ಪ್ರಶಾಂತ್ ಪಾಟೀಲ ಮಾತನಾಡಿರುವುದು..

ಸಹೋದರ ಸಂತೋಷ್​ನ ಸಾವಿಗೆ ಸಚಿವ ಕೆ ಎಸ್ ಈಶ್ವರಪ್ಪ ನೇರ ಕಾರಣ. ಶೇ.40ರಷ್ಟು ಕಮೀಷನ್ ಕೇಳಿದ್ದರು. ಮಾನನಷ್ಟ ಮೊಕದ್ದಮೆ ಹಾಕಿದ್ದರು. ಜೀವ ಬೇದರಿಕೆ ಕೂಡ ಹಾಕಿದ್ದರು ಎಂದು ಸೋದರ ಪ್ರಶಾಂತ್‌ ಪಾಟೀಲ ಆರೋಪಿಸಿದ್ದಾರೆ. ಹೀಗಾಗಿ, ಅವರನ್ನು ಬಂಧಿಸಬೇಕು, ತಮ್ಮನ ಸಾವಿಗೆ ನ್ಯಾಯ ಸಿಗಲೇಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಈಶ್ವರಪ್ಪ ವಿರುದ್ಧ ಕಮಿಷನ್​ ಆರೋಪ ಮಾಡಿದ್ದ ಗುತ್ತಿಗೆದಾರ.. ಬೆಳಗಾವಿಯ ಸಂತೋಷ್​ ಪಾಟೀಲ್​ ಆತ್ಮಹತ್ಯೆ

ಅನೇಕ ಬಾರಿ ಸಚಿವ ಈಶ್ವರಪ್ಪರನ್ನು ಸಂತೋಷ್​ ಪಾಟೀಲ್ ಭೇಟಿಯಾಗಿದ್ದ. ಸಚಿವ ಈಶ್ವರಪ್ಪನವರ ಮೌಖಿಕ ಆದೇಶದ ಮೇರೆಗೆ ಸಂತೋಷ್​ 4 ಕೋಟಿ ರೂ. ಸಾಲ ಮಾಡಿ ಕೆಲಸ ಮಾಡಿಸಿದ್ದನು ಎಂಬ ಮಾಹಿತಿ ಕೂಡ ನೀಡಿದರು. ಇನ್ನೂ ಸಂತೋಷ್​ಗೆ ಒಂದು ವರ್ಷದ ಮಗು ಸಹ ಇದೆ. ಕುಟುಂಬದ ಗತಿಯೇನು ಎಂದು ಅಳಲು ತೋಡಿಕೊಂಡರು. ಬೆಳಗಾವಿಗೆ ಪಾರ್ಥಿವ ಶರೀರ ತರಲಾಗುವುದು. ಆದ್ರೆ, ಈಶ್ವರಪ್ಪ ಅರೆಸ್ಟ್ ಆಗೋವರೆಗೂ ಅಂತ್ಯಕ್ರಿಯೆ ಮಾಡೋದಿಲ್ಲ ಎಂದರು.

Last Updated : Apr 12, 2022, 6:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.