ಬೆಳಗಾವಿ: ಕರೋಕೆ ಮ್ಯೂಸಿಕ್ ಮತ್ತು ಹಿಂದೂಸ್ತಾನ ಗಾಯನವನ್ನು ಕಲಿಯ ಬಯಸುವ ಸಂಗೀತ ಪ್ರಿಯರಿಗೆ, ಬೆಳಗಾವಿಯ ನಿವೇದಾರ್ಪಣ ಅಕಾಡೆಮಿ ಆಫ್ ಮ್ಯೂಸಿಕ್ ಕೇಂದ್ರದ ವತಿಯಿಂದ ನವೆಂಬರ್ 3 ರಂದು 7ನೇ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕಿ ನಿವೇದಿತಾ ಚಂದ್ರಶೇಖರ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಕರೋಕೆ ಮ್ಯೂಸಿಕ್ ಮತ್ತು ಹಿಂದೂಸ್ತಾನ ಗಾಯನವನ್ನು ಕಲಿಯ ಬಯಸುವ ಸಂಗೀತ ಪ್ರಿಯರಿಗೆ ನಿವೇದಾರ್ಪಣ ಅಕಾಡೆಮಿ ಆಫ್ ಮ್ಯೂಸಿಕ್ ಒಂದು ಕೇಂದ್ರವಾಗಿದ್ದು, ಇಲ್ಲಿನ ಪ್ರತಿಯೊಬ್ಬರಿಗೂ ಶಾಸ್ತ್ರೀಯ ಸಂಗೀತದ ಆಳ ಜ್ಞಾನ ಇರದಿದ್ದರು ತಮ್ಮೊಳಗಿರುವ ಸಂಗೀತ ಜ್ಞಾನದಿಂದ ನಿವೇದಾರ್ಪಣ ಅಕಾಡಮಿ ಆಫ್ ಮ್ಯುಸಿಕ್ ವತಿಯಿಂದ 7ನೇ ಸಂಗೀತ ಸಂಜೆ ಕಾರ್ಯಕ್ರಮವು ನವೆಂಬರ 3 ರಂದು ಸಂಜೆ 5.30ಕ್ಕೆ ರಾಮನಾಥ ಮಂಗಲ ಕಾರ್ಯಲಯದಲ್ಲಿ ನಡೆಯಲಿದೆ ಎಂದರು.
ಈ ಬಾರಿ ಸಂಗೀತ ನಿರ್ದೇಶಕ ಪೂರ್ಣ ಚಂದ್ರ ತೇಜಸ್ವಿ ಅವರು ಬರಲಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲ ಸಾರ್ವಜನಿಕರಿಗೆ ಉಚಿತ ಪ್ರವೇಶ ಇರುತ್ತದೆ ಎಂದರು.