ಹೊಸಪೇಟೆ (ವಿಜಯನಗರ): ಕಬ್ಬಿಣದ ರಾಡ್ನಿಂದ ಹೊಡೆದು ಆರ್ಟಿಐ ಕಾರ್ಯಕರ್ತ ಶ್ರೀಧರ್ ಹತ್ಯೆಗೈದಿದ್ದ ಆರೋಪಿಯನ್ನು ಬಂಧಿಸುವಲ್ಲಿ ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಎಚ್.ಕೆ.ಹಾಲೇಶ್ ಎಂದು ಗುರುತಿಸಲಾಗಿದೆ.
ಜುಲೈ 13ರಂದು ನನಗೆ ಜೀವ ಬೆದರಿಕೆ ಬಂದಿತ್ತು. ನಂತರ ಪಿ.ಟಿ.ಪರಮೇಶ್ವರ ನಾಯ್ಕ ಮಗ ಭರತ್ ಮೇಲೆ ಪ್ರಕರಣ ದಾಖಲಿಸಿದ್ದೆ. ಅಲ್ಲದೇ, ಹಾಲೇಶ್ ಎನ್ನುವರ ಮೇಲೆ ದೂರು ದಾಖಲಿಸಿದ್ದೇನೆ. ಹಾಗಾಗಿ ನನಗೆ ಅವರಿಂದ ಜೀವಭಯವಿದೆ ಎಂದು ಶ್ರೀಧರ್ ತಮ್ಮ ಪತ್ನಿಗೆ ತಿಳಿಸಿದ್ದರು. ಇದನ್ನೇ ದೂರಿನಲ್ಲಿ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಹಾಲೇಶ್ ಎಂಬಾತನನ್ನು ಬಂಧಿಸಿದ್ದಾರೆ.
ಹಾಲೇಶ್ ಬಂಧನವಾಗುತ್ತಿದಂತೆ ಪಿಟಿಪಿ ಮಗ ಭರತ್ ನಾಯ್ಕ್ ತೆಲೆಮರಿಸಿಕೊಂಡಿದ್ದಾನೆ ಎಂದು ಗುಮಾನಿ ಎದ್ದಿದೆ. ಎಚ್.ಕೆ ಹಾಲೇಶ್ ರಾಜಕಾರಣಿಗಳು ಹಾಗೂ ಸ್ವಾಮೀಜಿಗಳ ಜೊತೆ ಫೋಟೋ ತೆಗೆಸಿಕೊಂಡಿರುವುದು ವೈರಲ್ ಆಗಿದೆ.