ETV Bharat / city

ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಕಾಯ್ದೆ ಯಾವುದೇ ಧರ್ಮದ ವಿರುದ್ಧ ಇಲ್ಲ- ಗೃಹ ಸಚಿವ ಆರಗ ಜ್ಞಾನೇಂದ್ರ

ಮತಾಂತರ ನಿಷೇಧ ವಿಧೇಯಕ ತಂದಿರುವುದು ಯಾವುದೇ ಧರ್ಮದ ವಿರುದ್ಧ ಅಲ್ಲ ಅಥವಾ ಯಾವುದೇ ಧರ್ಮದ ಹಕ್ಕನ್ನು ಮೊಟಕುಗೊಳಿಸುವುದಕ್ಕಲ್ಲ. ಈ ಕಾಯ್ದೆ ವಾಸ್ತವವಾಗಿ ಹಿಂದಿನ ಕಾಂಗ್ರೆಸ್ ಸರ್ಕಾರದ ಕೂಸು, ಅದನ್ನೇ ಇನ್ನಷ್ಟು ಬಲಗೊಳಿಸಿದ್ದೇವೆ. ಇದಕ್ಕೆ ಸದನದ ಸದಸ್ಯರು ಒಪ್ಪಿಗೆ ನೀಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.

Religious Freedom Act No Religion Against: Home Minister Araga Gnanendra
ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಕಾಯಿದೆ ಯಾವುದೇ ಧರ್ಮದ ವಿರುದ್ಧ ಇಲ್ಲ- ಗೃಹ ಸಚಿವ ಆರಗ ಜ್ಞಾನೇಂದ್ರ
author img

By

Published : Dec 23, 2021, 1:37 PM IST

ಬೆಳಗಾವಿ: ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲಾದ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ, ಯಾವುದೇ ಧರ್ಮದ ವಿರುದ್ಧವಲ್ಲ, ಸಮಾಜದಲ್ಲಿ ಶಾಂತಿ ಹಾಗೂ ಸಾಮರಸ್ಯ ಕಾಪಾಡಿಕೊಳ್ಳಲು ಈ ಕಾಯ್ದೆ ಸಹಕಾರಿಯಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಗೆ ತಿಳಿಸಿದ್ದಾರೆ.

ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ವಿಧೇಯಕ-2021ಕುರಿತು ಮಾತನಾಡಿದ ಅವರು, ಈಗಾಗಲೇ ಎಂಟು ರಾಜ್ಯಗಳು ಈ ವಿಧೇಯಕವನ್ನು ತಂದಿವೆ. ಕರ್ನಾಟಕ ಒಂಬತ್ತನೇ ರಾಜ್ಯವಾಗಲಿದೆ. ಇತ್ತೀಚೆಗೆ ಮತಾಂತರ ದೊಡ್ಡ ಪಿಡುಗಾಗಿದೆ. ಇತ್ತೀಚೆಗೆ ಮತಾಂತರ ನಿಷೇಧ ಮಾಡಲು ಮಠಾಧೀಶರು ಸೇರಿದಂತೆ ಹಲವಾರು ಮಂದಿ ಒತ್ತಾಯಿಸಿದ್ದಾರೆ. ಹಾಗಾಗಿ, ಮತಾಂತರ ನಿಷೇಧ ಕಾಯ್ದೆಯನ್ನು ತರುತ್ತಿದ್ದೇವೆ ಎಂದು ಹೇಳಿದರು.

ಬಲವಂತದ ಮತಾಂತರಕ್ಕೆ ಮಾತ್ರ ಶಿಕ್ಷೆಯ ಜೊತೆಗೆ ದಂಡವಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಈಗಾಗಲೇ ಕಾಯ್ದೆ ಜಾರಿಯಾಗಿದೆ. ತಮಿಳುನಾಡಿನಲ್ಲೂ ಕಾಯ್ದೆ ತರಬೇಕಾಗಿತ್ತು, ಆದರೆ ಆಗಲಿಲ್ಲ. ಈ ಕಾಯ್ದೆ ಹಿಂದಿನ ಸರ್ಕಾರದ ಶಿಶು, ನಮ್ಮದಲ್ಲ ಎಂದು ಆರಗ ಜ್ಞಾನೇಂದ್ರ ಪ್ರಸ್ತಾಪಿಸಿದರು.

'ಸ್ವಇಚ್ಛೆಯ ಮತಾಂತರಕ್ಕೆ ಅಡ್ಡಿ ಇಲ್ಲ'

ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಹಕ್ಕು ವಿಧೇಯಕವನ್ನು ಮಂಡಿಸಲಾಗಿದ್ದು, ಸಮಾಜದಲ್ಲಿ ಪಿಡುಗಾಗಿ ಪರಿಣಮಿಸಿರುವ ಬಲವಂತದ ಹಾಗೂ ಆಮಿಷದ ಮತಾಂತರ ಹಾವಳಿಯನ್ನು ತಡೆಯುವ ಅಗತ್ಯವಿದೆ. ಸ್ವಇಚ್ಛೆಯಿಂದ ಯಾರಾದರೂ ಮತಾಂತರವಾದರೆ ಅದಕ್ಕೆ ಯಾರದೂ ಅಸಮ್ಮತಿಯಿಲ್ಲ. ಕಾಯ್ದೆಯ ಕುರಿತು ಯಾರೂ ಭಯ ಪಡಬೇಕಾಗಿಲ್ಲ, ಪ್ರತಿಯೊಂದು ಧರ್ಮದವರ ಅಸ್ಮಿತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕಾಯಿದೆಯನ್ನು ತಂದಿದ್ದೇವೆ ಎಂದರು.

ಮತಾಂತರ ನಿಷೇಧ ವಿಧೇಯಕ ತಂದಿರುವುದು ಯಾವುದೇ ಧರ್ಮದ ವಿರುದ್ಧ ಅಲ್ಲ ಅಥವಾ ಯಾವುದೇ ಧರ್ಮದ ಹಕ್ಕನ್ನು ಮೊಟಕುಗೊಳಿಸುವುದಕ್ಕಲ್ಲ. ಈ ಕಾಯಿದೆ ವಾಸ್ತವವಾಗಿ ಹಿಂದಿನ ಕಾಂಗ್ರೆಸ್ ಸರ್ಕಾರದ ಕೂಸು, ಅದನ್ನೇ ಇನ್ನಷ್ಟು ಬಲಗೊಳಿಸಿದ್ದೇವೆ. ಇದಕ್ಕೆ ಸದನದ ಸದಸ್ಯರು ಒಪ್ಪಿಗೆ ನೀಡಬೇಕು ಎಂದು ಸಚಿವರು ಮನವಿ ಮಾಡಿದರು.

ಶಾಸಕ ಗೂಳಿಹಟ್ಟಿ ಶೇಖರ್‌ ತಾಯಿ ಮತಾಂತರದ ಪ್ರಸ್ತಾಪ

ಇದೇ ಸದನದಲ್ಲಿ ಶಾಸಕರ ತಾಯಿ ಮತಾಂತರ ಆಗಿದ್ದನ್ನು ನೋಡಿದ್ದೇವೆ. ಮತಾಂತರ ಯಾವ ರೀತಿ ಆಗುತ್ತಿದೆ ಎಂದು ನಮ್ಮೆಲ್ಲರ ಗಮನಕ್ಕೆ ಇದೆ. ಉಡುಪಿಯಲ್ಲಿ ಒಂದು ಆತ್ಮಹತ್ಯೆ ಪ್ರಕರಣವಾಯಿತು. ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಿದರು.

ಮತಾಂತರ ಆಗಲು ಇಚ್ಛೆ ಇರುವ ವ್ಯಕ್ತಿಗೆ ಸ್ವಾತಂತ್ರ್ಯ ಇದೆ. 30 ದಿನಗಳ ಮುಂಚೆ ಜಿಲ್ಲಾಧಿಕಾರಿಗೆ ತಿಳಿಸಬೇಕು. 21 ದಿನಗಳ ಒಳಗೆ ಜಿಲ್ಲಾಧಿಕಾರಿ ಮುಂದೆ ಹಾಜರಾಗಿರಬೇಕು. ಅದನ್ನು ಜಿಲ್ಲಾಡಳಿತ ನೋಟಿಸ್ ಬೋರ್ಡ್‌ನಲ್ಲಿ‌ ಹಾಕಬೇಕು. ಬಲವಂತದ ಮತಾಂತರ ಮಾಡಿದರೆ ಯಾವ ಶಿಕ್ಷೆ ಅಂತ ಇರಲಿಲ್ಲ, ಈಗ ನಾವು ತರುತ್ತಿದ್ದೇವೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಬಲವಂತದ ಮತಾಂತರ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಬಹುದು. ಬಲವಂತದ ಮತಾಂತರ ಮಾಡಿದರೆ ಮೂರರಿಂದ ಐದು ವರ್ಷ ಜೈಲು ಶಿಕ್ಷೆ, 25 ಸಾವಿರ ರೂ. ದಂಡ, ಅಪ್ರಾಪ್ತರು - ಅನೂಸೂಚಿತ ಜಾತಿ ಪಂಗಡಕ್ಕೆ ಸೇರಿದ ಪ್ರಕರಣವಾದರೆ 3 ರಿಂದ 10 ವರ್ಷ ಶಿಕ್ಷೆ, 50 ಸಾವಿರ ರೂ. ದಂಡ, ಸಾಮೂಹಿಕ ಮತಾಂತರ ಉಲ್ಲಂಘನೆ 3 ರಿಂದ 10 ವರ್ಷ ಶಿಕ್ಷೆ, 1 ಲಕ್ಷ‌ ರೂ. ದಂಡ, ಮತಾಂತರದಿಂದ ಬಲಿಯಾದರೆ ಆಪಾದಿತರಿಂದ 5 ಲಕ್ಷ ಮತ್ತು ನ್ಯಾಯಾಲಯದ ಶಿಕ್ಷೆಗೆ ಒಳಪಡಬೇಕು ಎಂದು ವಿವರಿಸಿದರು.

ಬಲವಂತದ,‌ ಮತಾಂತರದ ಉದ್ದೇಶದಿಂದ ಮದುವೆಯಾದರೆ ಅದು ಅಸಿಂಧುವಾಗುತ್ತದೆ, ಜಾಮೀನುರಹಿತ ಪ್ರಕರಣವಾಗಿರುತ್ತದೆ. ಮೂಲ ಮತದ ಎಲ್ಲ ಸೌಲಭ್ಯಗಳನ್ನು ವ್ಯಕ್ತಿ ಕಳೆದುಕೊಳ್ಳುತ್ತಾನೆ. ಮತಾಂತರದ ವ್ಯಕ್ತಿಯನ್ನು ಪುನರ್‌ವರ್ಗಿಕರಿಸಿ ದಾಖಲಾತಿಯಲ್ಲಿ ಬರೆಯಲಾಗುತ್ತದೆ. ಮತಾಂತರ ತಡೆಯುತ್ತಿಲ್ಲ. ಎಲ್ಲರನ್ನು ಒಪ್ಪಿಕೊಂಡು ಅಪ್ಪಿಕೊಂಡು ಬದುಕುತ್ತಿದ್ದೇವೆ. ಶ್ರೇಷ್ಠ ಸಂಸ್ಕೃತಿ ಒಡೆಯಬಾರದು ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ ಡೋಂಗಿ ರಾಜಕಾರಣ ಬಟಾಬಯಲಾಗಿದೆ: ಸಚಿವ ಆರ್.ಅಶೋಕ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.