ETV Bharat / city

ಪುನೀತ್ ರಾಜ್‌ಕುಮಾರ್ ನೆನೆದು ಭಾವುಕರಾದ ರಮೇಶ್ ಜಾರಕಿಹೊಳಿ‌ - ಪುನೀತ್ ‌ಸ್ಮರಣಾರ್ಥವಾಗಿ ಗೀತ ನಮನ ಕಾರ್ಯಕ್ರಮ

ಪುನೀತ್ ‌ಸ್ಮರಣಾರ್ಥವಾಗಿ ಹುದಲಿಯಲ್ಲಿ ಆಯೋಜಿಸಿದ್ದ 'ಗೀತ ನಮನ' ಹಾಗೂ 'ಅನ್ನಸಂತರ್ಪಣೆ' ಕಾರ್ಯಕ್ರಮವನ್ನು ಮಾಜಿ ಸಚಿವ ‌ರಮೇಶ್​ ಜಾರಕಿಹೊಳಿ (Ramesh Jarkiholi) ಉದ್ಘಾಟಿಸಿ, ಕೆಲಕಾಲ ಭಾವುಕರಾದರು.

Ramesh Jarkiholi
Ramesh Jarkiholi
author img

By

Published : Nov 14, 2021, 10:51 AM IST

ಬೆಳಗಾವಿ: ಮಾಜಿ ಸಚಿವ ‌ರಮೇಶ್​ ಜಾರಕಿಹೊಳಿ‌ (Ramesh Jarkiholi) ಪುನೀತ್​ ರಾಜ್​ಕುಮಾರ್ (Puneeth Rajkumar) ನೆನೆದು ಭಾವುಕರಾದ ಘಟನೆ ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಲ್ಲಿ ನಡೆಯಿತು.

ಶಿವರಾಜ್​ಕುಮಾರ್ (ShivaRajkumar) ಹಾಗೂ ಪುನೀತ್​ ರಾಜ್​ಕುಮಾರ್ ಅಭಿಮಾ‌ನಿಗಳ ಸಂಘದಿಂದ ಪುನೀತ್ ‌ಸ್ಮರಣಾರ್ಥವಾಗಿ ಹುದಲಿಯಲ್ಲಿ ಆಯೋಜಿಸಿದ್ದ 'ಗೀತ ನಮನ' ಹಾಗೂ 'ಅನ್ನಸಂತರ್ಪಣೆ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪುನೀತ್ ರಾಜಕುಮಾರ್ ಇಷ್ಟು ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದಾರೆಂದರೆ ನಂಬಲು ಸಾಧ್ಯವಿಲ್ಲ. ನಾವು ದೊಡ್ಡ ಕಲಾವಿದನನ್ನು ಕಳೆದುಕೊಂಡಿದ್ದೇವೆ. ಸೂರ್ಯ, ಚಂದ್ರ ಇರುವವರೆಗೂ ಅಪ್ಪು ನೆನಪು ಸದಾಕಾಲ ಇರುತ್ತದೆ ಎಂದರು.

ಪುನೀತ್ ‌ಸ್ಮರಣಾರ್ಥವಾಗಿ 'ಅನ್ನಸಂತರ್ಪಣೆ' ಕಾರ್ಯಕ್ರಮ ಆಯೋಜನೆ

ರಾಜ್ ಮನೆತನದಲ್ಲೇ ಪುನೀತ್ ರಾಜಕುಮಾರ್ ಬಹಳ ಒಳ್ಳೆಯ ಹುಡುಗ. ಜೊತೆಗೆ ಅವರು ಹಿರಿಯರನ್ನು ತುಂಬಾ ಗೌರವಿಸುತ್ತಿದ್ದರು. 1992ರ ಡಿಸೆಂಬರ್ 6 ರಂದು ಗೋಕಾಕ್‌‌ನ ನಮ್ಮ ನಿವಾಸಕ್ಕೆ ರಾಜ್​ ಕುಮಾರ್ ಇಡೀ ಕುಟುಂಬ ಬಂದಿತ್ತು. ಆಗ ಪುನೀತ್ ರಾಜಕುಮಾರ್​ಗೆ 16 ರಿಂದ 17 ವಯಸ್ಸು. ಆ ವೇಳೆ ನಮ್ಮ ತಂದೆ-ತಾಯಿ ಕಾಲಿಗೆ ಹಣೆ ಹಚ್ಚಿ ನಮಸ್ಕಾರ ಮಾಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

ಈ ವೇಳೆ ಕಿತ್ತೂರು ಕಲ್ಮಠದ ಸ್ವಾಮೀಜಿ, ಲಖನ್ ಜಾರಕಿಹೊಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.