ETV Bharat / city

ಗೋಕಾಕ್‌ ಸಾಹುಕಾರ್‌ ಆಟ ಮತ್ತೆ ಶುರು.. ದಿಢೀರ್ ದೆಹಲಿಗೆ ಹಾರಿದ ರಮೇಶ್ ಜಾರಕಿಹೊಳಿ‌.. ಸಂಪುಟ ಸೇರಲು ಕಸರತ್ತು.. - ದಿಢೀರ್ ‌ದೆಹಲಿಗೆ ಪ್ರಯಾಣ ಬೆಳೆಸಿದ ರಮೇಶ್​ ಜಾರಕಿಹೊಳಿ

ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ನಿಂದ ಬೆಳಗ್ಗೆ 9.55ರ ಫ್ಲೈಟ್‌ನಲ್ಲಿ ರಮೇಶ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಕದ ತಟ್ಟಲು ನಿರ್ಧರಿಸಿದ್ದು, ಸಂಪುಟ ಸೇರಿಸಿಕೊಳ್ಳುವಂತೆ ನಾಯಕರ ಮನವೊಲಿಸುವ ಸಾಧ್ಯತೆ ಇದೆ..

MLA Ramesh Jarakiholi
ಶಾಸಕ ರಮೇಶ್ ಜಾರಕಿಹೊಳಿ
author img

By

Published : Mar 22, 2022, 1:54 PM IST

ಬೆಳಗಾವಿ : ಯುಗಾದಿ ನಂತರ ರಾಜ್ಯ ಸಚಿವ ಸಂಪುಟ ಪುನಾರಚನೆ ಬಗ್ಗೆ ಸುದ್ದಿ ಹರಿದಾಡುತ್ತಿರುವ ಮಧ್ಯೆಯೇ ಸಂಪುಟ ಸೇರಲು ಶಾಸಕ ರಮೇಶ್ ಜಾರಕಿಹೊಳಿ ಕಸರತ್ತು ಆರಂಭಿಸಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಅವರು ದಿಢೀರ್ ‌ದೆಹಲಿಗೆ ಪ್ರಯಾಣ ಬೆಳೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ನಿಂದ ಬೆಳಗ್ಗೆ 9.55ರ ಫ್ಲೈಟ್‌ನಲ್ಲಿ ರಮೇಶ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಕದ ತಟ್ಟಲು ನಿರ್ಧರಿಸಿದ್ದು, ಸಂಪುಟ ಸೇರಿಸಿಕೊಳ್ಳುವಂತೆ ನಾಯಕರ ಮನವೊಲಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಕಾರ್ಮಿಕ ಕಲ್ಯಾಣಕ್ಕೆ ರಾಜ್ಯ ಸರ್ಕಾರದಿಂದ ಶೀಘ್ರವೇ ಕಾರ್ಮಿಕ ಸಂಹಿತೆ ತರಲಾಗುವುದು: ಶಿವರಾಮ್​ ಹೆಬ್ಬಾರ್​​​

ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಬಹುತೇಕ ಕ್ಲಿಯರ್ ಆಗಿದೆ ಎಂದು ಕೆಲ ದಿನಗಳ ಹಿಂದೆ ಮಾಜಿ ಸಚಿವ ಹಾಗೂ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದರು.

ರಮೇಶ್ ಜಾರಕಿಹೊಳಿಗೆ ಒಳ್ಳೆಯದಾಗುತ್ತೆ ಅಂತಾ ಆಸೆ ಇಟ್ಟುಕೊಂಡಿದ್ದೇವೆ ಎಂದೂ ಅವರು ಪ್ರತಿಕ್ರಿಯಿಸಿದ್ದರು. ಇದೀಗ ರಮೇಶ್ ದೆಹಲಿ ಯಾತ್ರೆ ಕೈಗೊಂಡಿದ್ದು, ಹೈಕಮಾಂಡ್ ನಾಯಕರು ಸ್ಪಂದಿಸುವರೆ ಎಂಬುದೇ ಸದ್ಯದ ಕುತೂಹಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.