ಬೆಳಗಾವಿ: ಕೈದಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ಹಿಂಡಲಗಾ ಕಾರಾಗೃಹದ ಆವರಣದಲ್ಲಿರುವ ಹಳೆ ಕ್ವಾರ್ಟರ್ಸ್ನಲ್ಲಿ ಬುಧವಾರ ತಡರಾತ್ರಿ ನಡೆದಿದೆ.
![Prisoner commits suicide](https://etvbharatimages.akamaized.net/etvbharat/prod-images/13415657_thumb.jpg)
ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ನಿಂಗಪ್ಪ ಬುಗ್ಗಿಪೂಜಾರಿ (48) ನೇಣಿಗೆ ಶರಣಾಗಿರುವ ಕೈದಿ. 10 ವರ್ಷಗಳ ಹಿಂದೆ ಪತ್ನಿ ಕೊಲೆ ಪ್ರಕರಣದಡಿ ನಿಂಗಪ್ಪ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ. ಪ್ರಸ್ತುತ ಈತ ಹಿಂಡಲಗಾ ಜೈಲಿನ ಹೊರತೋಟ ಕೆಲಸಕ್ಕೆ ನೇಮಕವಾಗಿದ್ದ.
ಕೈದಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.