ಬೆಳಗಾವಿ: ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ಶಿಕ್ಷಕರ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಗೆಲುವು ನಿಶ್ಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಮತದಾನದ ವೇಳೆ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ಸಮಾಜ ಸೇವೆಗೆ ಯಾವುದೇ ಪದವಿ ಬೇಡ: ಪ್ರಕಾಶ ಹುಕ್ಕೇರಿ ಎಸ್ಸೆಸ್ಸೆಲ್ಸಿಯಲ್ಲಿ ಫೇಲ್ ಆಗಿದ್ದಾರೆ. ಕೆಲಸ ಮಾಡಲು ಅವರಿಂದ ಆಗಲ್ಲ ಎಂದು ಪ್ರಭಾಕರ ಕೋರೆ ಹೇಳುತ್ತಿದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯ ಉಮೇಶ ಕತ್ತಿ ಹಾಗೂ ಲಕ್ಷ್ಮಣ ಸವದಿ ಅವರಿಗೆ ಜನರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅದೇ ರೀತಿ ಪ್ರಕಾಶ ಹುಕ್ಕೇರಿ ಅವರು 30 ವರ್ಷಗಳಿಂದ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಅಲ್ಲದೇ ಅಲ್ಲಿನ ಕ್ಷೇತ್ರದ ಜನರೇ ಅವರಿಗೆ ಉತ್ತಮ ಕೆಲಸಗಾರ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದರು.
ಯಾವುದೇ ಒಳಒಪ್ಪಂದವಿಲ್ಲ: ನಾವು ಗಂಭೀರವಾಗಿ ಚುನಾವಣೆ ನಡೆಸುತ್ತಿದ್ದೇವೆ. ನಮ್ಮಲ್ಲಿ ಯಾವುದೇ ರೀತಿ ಒಳಒಪ್ಪಂದ ನಡೆಯುತ್ತಿಲ್ಲ. ಶಕ್ತಿ ಹೆಚ್ಚಿವರೂ ಮುಂದೆ ಹೋಗುತ್ತಾರೆ. ಶಕ್ತಿ ಕಡಿಮೆ ಇರುವವರೂ ಹಿಂದೆ ಉಳಿಯುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ ಹಣದ ಹೊಳೆ ಹರಿಸುತ್ತಿದೆ: ಕೈ ಅಭ್ಯರ್ಥಿ ಸುನೀಲ್ ಸಂಕ