ಬೆಳಗಾವಿ: ಮಹಾರಾಷ್ಟ್ರದಲ್ಲಿ ನಡೆಯುಲಿರುವ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯದ ಬಿಜೆಪಿ ನಾಯಕರು ಕೂಡ ಭರ್ಜರಿ ಪ್ರಚಾರ ಮಾಡಿ, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಭೇಟೆ ಆರಂಭಿಸಿದ್ದಾರೆ.
![Maharastra Election Campaign](https://etvbharatimages.akamaized.net/etvbharat/prod-images/kn-bgm-04-kore-prachara-ka10009_18102019170844_1810f_1571398724_1025.jpeg)
ಇದೀಗ ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ಹಿರಿಯ ಮುಖಂಡ ಪ್ರಭಾಕರ್ ಕೋರೆ ಹಾಗೂ ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ್ ಕವಟಿಗಿಮಠ ಇಂದು ಮಹಾರಾಷ್ಟ್ರದ ಇಂಚಲಕರಂಜಿ ತಾಲೂಕಿನಲ್ಲಿ ಸ್ಥಳೀಯ ಬಿಜೆಪಿ ಅಭ್ಯರ್ಥಿಯಾದ ಸುರೇಶ್ ಹಲವಂಕರ್ ಪರವಾಗಿ ಪ್ರಚಾರ ನಡೆಸಿದ್ದಾರೆ.
ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಗಡಿಭಾಗ ಬೆಳಗಾವಿ. ಇಲ್ಲಿನ ಅನೇಕ ನಾಯಕರು ಮರಾಠಿ ಬಲ್ಲವರಾಗಿದ್ದು, ಜೊತೆಗೆ ಲಿಂಗಾಯತ ಮತ ಸೆಳೆಯುವ ಉದ್ದೇಶದಿಂದ ಪ್ರಚಾರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ.