ETV Bharat / city

ಪೌರ ಕಾರ್ಮಿಕರಿಗೆ ಸಮರ್ಥನಂ ಅಂಧ-ದಿವ್ಯಾಂಗ ಸಂಸ್ಥೆಯಿಂದ ಪಿಪಿಇ ಕಿಟ್ ವಿತರಣೆ

ವಾರ್ಡ್ ಮಟ್ಟದಲ್ಲಿ ಪೌರಕಾರ್ಮಿಕರಿಗೆ ಅವರ ರಕ್ಷಣೆಯ ಕಾಳಜಿ ಹೊತ್ತು ಸಮರ್ಥನಂ ಸಂಸ್ಥೆ ಸಮಗ್ರ ಕೋವಿಡ್-19 ರಕ್ಷಣಾ ಕಿಟ್ ವಿತರಿಸುತ್ತಿದೆ..

ppe-kit-distribution-for-civilian-workers-in-belagavi
ಬೆಳಗಾವಿಯ ಸಮರ್ಥನಂ ಅಂಧ ದಿವ್ಯಾಂಗ ಸಂಸ್ಥೆಯಿಂದ ಪಿಪಿಇ ಕಿಟ್ ವಿತರಣೆ
author img

By

Published : Jul 6, 2020, 4:59 PM IST

ಬೆಳಗಾವಿ : ತಮ್ಮ ಜೀವ ಪಣಕ್ಕಿಟ್ಟು ಪರರ ಆರೋಗ್ಯ ರಕ್ಷಣೆಗೆ ಹಗಲಿರುಳು ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ಸಮರ್ಥನಂ ಅಂಧ-ದಿವ್ಯಾಂಗ ಸಂಸ್ಥೆ ಪಿಪಿಇ ಕಿಟ್ ವಿತರಿಸಿದೆ.

ಸದಾಶಿವನಗರದ ಡಾ.ಅಂಬೇಡ್ಕರ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ ಹೆಚ್ ಚಾಲನೆ ನೀಡಿದರು.

ಪೌರ ಕಾರ್ಮಿಕರಿಗೆ ಸಮರ್ಥನಂ ಅಂಧ-ದಿವ್ಯಾಂಗ ಸಂಸ್ಥೆಯಿಂದ ಪಿಪಿಇ ಕಿಟ್ ವಿತರಣೆ

ಮಹಾನಗರ ಪಾಲಿಕೆ ಆಯುಕ್ತ ಡಾ. ಕೆ ಹೆಚ್ ಜಗದೀಶ್‌ ಮಾತನಾಡಿ, ವಾರ್ಡ್ ಮಟ್ಟದಲ್ಲಿ ನಮ್ಮ ಪೌರಕಾರ್ಮಿಕರಿಗೆ ಅವರ ರಕ್ಷಣೆಯ ಕಾಳಜಿ ಹೊತ್ತು ಸಮರ್ಥನಂ ಸಂಸ್ಥೆ ಸಮಗ್ರ ಕೋವಿಡ್-19 ರಕ್ಷಣಾ ಕಿಟ್ ವಿತರಿಸುತ್ತಿದೆ. ವೈದ್ಯರು, ಪೌರಕಾರ್ಮಿಕರು, ಪೊಲೀಸರು, ಆಶಾ, ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತರು ಹಾಗೂ ಮಾಧ್ಯಮದವರು ಕೊರೊನಾ ಯುದ್ಧದಲ್ಲಿ ಹೋರಾಡುತ್ತಿದ್ದಾರೆ.

ಹೀಗಾಗಿ ಅವರ ಆರೋಗ್ಯ ಕೂಡ ಸಮಾಜಕ್ಕೆ ಅಗತ್ಯವಿದೆ. ಮಹಾನಗರ ಪಾಲಿಕೆಯ ಜೊತೆಗೆ ಖಾಸಗಿ ಸಂಸ್ಥೆಗಳು ಸಹ ನಮ್ಮ ಪೌರಕಾರ್ಮಿಕರ ಸಹಾಯಕ್ಕೆ ಬಂದಿರೋದು ಸಂತಸ ತಂದಿದೆ ಎಂದರು. ಸಮರ್ಥನಂ ಸಂಸ್ಥೆಯ ವೀರೇಶ್ ಕಿವಡಸನ್ನವರ, ಪಾಲಿಕೆ ಆರೋಗ್ಯಾಧಿಕಾರಿ ಡಾ. ಬಸವರಾಜ ದಬಾಡಿ, ಸಮರ್ಥನಂ ಅಧ್ಯಕ್ಷ ಅರುಣ್‌ಕುಮಾರ್, ಉಜ್ವಲಾ ಬಡವನಾಚೆ, ಲೀನಾ ಟೋಪನ್ನವರ, ಗೀತಾ ಕೋಳಿ ಹಾಗೂ ಮಾಧುರಿ ಮಾಳಿ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.