ಬೆಳಗಾವಿ: ಸಿಸಿಐಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡುವ ಮೂಲಕ ಅಕ್ರಮವಾಗಿ ಇಪ್ಪತ್ತು ಲಕ್ಷ ರೂ.ಮೌಲ್ಯದ 1,440 ಲೀಟರ್ ಗೋವಾ ಮದ್ಯವನ್ನು ಸಾಗಣೆ ಮಾಡುತ್ತಿದ್ದ ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೈಲಹೊಂಗಲ ತಾಲೂಕಿನ ಗರಜೂರ ಗ್ರಾಮದ ಸಿದ್ಧಾರೋಡ ಪಟಾತ (24) ಬಂಧಿತ ಆರೋಪಿ. ಈತನೊಂದಿಗೆ ಇದ್ದ ಮತ್ತೊಬ್ಬ ಆರೋಪಿ ತಾಲೂಕಿನ ಕಣಬರ್ಗಿಯ ಕೋನವಾಳ ಗಲ್ಲಿಯ ಶಂಕರ ದೇಸನೂರು (35) ಪರಾರಿ ಆಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬಂಧಿತ ಆರೋಪಿಗಳು ಗೋವಾದಿಂದ ಅಕ್ರಮವಾಗಿ ಮದ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಐಬಿ ಪೊಲೀಸರು ತಾಲೂಕಿನ ಕಾಕತಿ ಠಾಣೆ ವ್ಯಾಪ್ತಿಯ ಹೊನಗಾ ಗ್ರಾಮದ ಬಳಿ ದಾಳಿ ನಡೆಸಿದ್ದಾರೆ. ಈ ವೇಳೆ, ದಾಳಿಯಲ್ಲಿ 1920 ವಿವಿಧ ಬಗ್ಗೆ ಸಾರಾಯಿ ಬಾಟಲ್ ಗಳಲ್ಲಿ ತಬಿದ್ದ 1,440 ಲೀಟರ್ ಗೋವಾ ಮದ್ಯವನ್ನು ಸೀಜ್ ಮಾಡಿದ್ದಲ್ಲದೇ ಮದ್ಯ ಸಾಗಿಸಲು ಬಳಸುತ್ತಿದ್ದ ವಾಹನ ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಮಹಾನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್, ಡಿಸಿಪಿಗಳಾದ ಡಾ.ವಿಕ್ರಮ ಆಮಟೆ, ಚಂದ್ರಶೇಖರ್ ನೀಲಗಾರ,ಕ್ರೈಂ ಎಸಿಪಿ ನಾರಾಯಣ ಭರಮನಿ ಮಾರ್ಗದರ್ಶನದಲ್ಲಿ ಸಿಸಿಐಬಿ ಪೊಲೀಸ್ ಇನ್ಸ್ಪೆಕ್ಟರ್ ಸಂಜೀವ ಕಾಂಬಳೆ ನೇತೃತ್ವದ ತಂಡದ ಸಿಬ್ಬಂದಿ ಭಾಗಿಯಾಗಿದ್ದಾರೆ.