ETV Bharat / city

ಆಸ್ಪತ್ರೆಗೆ ಹೊರಟ್ಟಿದ್ದ ಮಹಿಳೆ, ಹಾಲು ಪೂರೈಸುತಿದ್ದ ವೃದ್ಧನಿಗೆ ಲಾಠಿ‌ ಏಟು; ಖಾಕಿ ದರ್ಪಕ್ಕೆ ಕಣ್ಣೀರಿಟ್ಟ ಅಜ್ಜ

ದಿನಸಿ, ತರಕಾರಿ ಖರೀದಿಸುವ ನೆಪ ಹೇಳಿಕೊಂಡು ರಸ್ತೆಗಿಳಿದಿದ್ದ ಅನೇಕರಿಗೆ ಬೆಳಗಾವಿ ಪೊಲೀಸರು ಲಾಠಿ ರುಚಿ ತೋರಿಸಿದರು.

author img

By

Published : Apr 17, 2020, 9:36 PM IST

police hitting to old man
ಮಹಿಳೆ ಮೇಲೆ ಲಾಠಿ ಬೀಸುತ್ತಿರುವ ಪೊಲೀಸ್​​​

ಬೆಳಗಾವಿ: ವೈದ್ಯಕೀಯ ಹಾಗೂ ಹಾಲು ಮಾರಾಟಕ್ಕೆ ಅನುಮತಿ ನೀಡಿದ್ದರೂ ಆಸ್ಪತ್ರೆಗೆ ಬಂದಿದ್ದ ಮಹಿಳೆ ಮತ್ತು ಬೈಕ್​​​ನಲ್ಲಿ ಹಾಲು ಮಾರಾಟಕ್ಕೆ ಹೋಗುತ್ತಿದ್ದ ವೃದ್ಧನ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ.

ಲಾಠಿ ಏಟಿನ ನೋವು ತಾಳಲಾರದೇ ಬೈಕ್​​ನಿಂದ ಕೆಳಗಿಳಿದ ವೃದ್ಧ, ಕಣ್ಣೀರಿಟ್ಟಿದ್ದಾರೆ. ಪೊಲೀಸಪ್ಪನ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಪರಿಣಾಮ ವೈದ್ಯಕೀಯ ಹಾಗೂ ಹಾಲು ಮಾರಾಟಕ್ಕೆ ರಿಯಾಯಿತಿ ನೀಡಿ ಬೆಳಗಾವಿಯನ್ನು ಸೀಲ್​​​​​​ಡೌನ್ ಮಾಡಲಾಗಿದೆ.

ಈ ನಿಟ್ಟಿನಲ್ಲಿ ಬೆಳಗಾವಿಯ ಸದಾಶಿವನಗರ, ಚೆನ್ನಮ್ಮ ವೃತ್ತ, ಗಾಂಧಿನಗರದಲ್ಲಿ ಅನಗತ್ಯವಾಗಿ ರಸ್ತೆಗಿಳಿದ ಪುಂಡರಿಗೆ ಬೆಳಗಾವಿ ನಗರ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.