ಬೆಳಗಾವಿ/ಚಿಕ್ಕೋಡಿ: ನಿಜಾಮುದ್ದೀನ್ ಸಭೆಯಲ್ಲಿ ಭಾಗವಹಿಸಿದ್ದವರನ್ನು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಹುಕ್ಕೇರಿ ಠಾಣೆಯ ಪಿಎಸ್ಐ ಶಿವಾನಂದ, ಗುಡಗನಟ್ಟಿ ತಬ್ಲಿಗ ಸಮಾಜದ ಏರಿಯಾ ಹಾಗೂ ಹುಕ್ಕೇರಿ ಪಟ್ಟಣದ ವಿವಿಧ ಗಲ್ಲಿಗಳಿಗೆ ತೆರಳಿ ನಿಜಾಮುದ್ದೀನ್ ಸಭೆಗೆ ಹೋದವರ ಮಾಹಿತಿ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಈಗಾಗಲೇ ಜಿಲ್ಲೆಯಿಂದ ನಿಜಾಮುದ್ದೀನ್ ಸಭೆಗೆ ಹೋಗಿದ್ದ 5 ಜನರನ್ನ ಪತ್ತೆ ಹಚ್ಚಲಾಗಿದೆ. ರಾಜ್ಯದಿಂದ 1500ಕ್ಕೂ ಹೆಚ್ಚು ಜನ ನಿಜಾಮುದ್ದೀನ್ ಸಭೆಗೆ ಹೋಗಿದ್ದು, ಅವರಲ್ಲಿ 342 ಜನ ಪತ್ತೆಯಾಗಿದ್ದಾರೆ.
ನಿಮ್ಮ ಮನೆಯವರ ಆರೋಗ್ಯಕ್ಕಾದರೂ ಮಾಹಿತಿ ನೀಡಿ ಸ್ವಯಂ ಪ್ರೇರಿತರಾಗಿ ಚಿಕಿತ್ಸೆಗೆ ಬನ್ನಿ ಎಂದು ಪೊಲೀಸರು ಮನವಿ ಮಾಡುತ್ತಿದ್ದಾರೆ.