ETV Bharat / city

ಚಿಕ್ಕೋಡಿ: ವಾಹನ ಸವಾರರಿಂದ ಹಣ ಪೀಕುತ್ತಿದ್ದ ನಕಲಿ ಪೊಲೀಸ್​ಗೆ ಹಿಗ್ಗಾಮುಗ್ಗಾ ಥಳಿತ - ನಕಲಿ ಪೊಲೀಸ್​ಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು

ವಾಹನ ಸವಾರರಿಂದ ಹಣ ಪೀಕುತ್ತಿದ್ದ ನಕಲಿ ಪೊಲೀಸ್​ಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

assults on Fake police
ನಕಲಿ ಪೊಲೀಸ್​ಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
author img

By

Published : Jan 5, 2022, 11:01 AM IST

ಚಿಕ್ಕೋಡಿ: ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸಪ್ಪನನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಅಂಕಲಿ ಗ್ರಾಮದಲ್ಲಿ ನಡೆದಿದೆ.

ನಕಲಿ ಪೊಲೀಸ್​ಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು

ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಹೊರವಲಯದ ಚಿಕ್ಕೋಡಿ ರಸ್ತೆಯ ಕೇರೂರ ಕ್ರಾಸ್‌ ಬಳಿ ವಾಹನಗಳನ್ನು ತಡೆದು ನಕಲಿ ಪೊಲೀಸ್​​ ಒಬ್ಬ ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದ. ಅನುಮಾನ ಬಂದ ವಾಹನ ಸವಾರರು ಮತ್ತು ಸ್ಥಳೀಯರು ವಿಚಾರಿಸಿದಾಗ ಈತ ನಕಲಿ ಪೊಲೀಸ್ ಎಂಬ ವಿಚಾರ ಬೆಳಕಿಗೆ ಬಂದಿದೆ. ಆಗ ಎಲ್ಲರೂ ಸೇರಿ ಆತನಿಗೆ ಥಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ನಕಲಿ ಪೊಲೀಸ್​​ನನ್ನು ವಶಕ್ಕೆ ಪಡೆದಿದ್ದಾರೆ. ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: SSLC ವಿದ್ಯಾರ್ಥಿ ಅನುಮಾನಾಸ್ಪದ ಸಾವು: 7 ಮಂದಿ ವಿರುದ್ಧ ಎಫ್ ಐಆರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.