ಬೆಳಗಾವಿ: ಕೊರೊನಾ ಕಾರಣಕ್ಕೆ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿನ ಕೈದಿಗಳಿಗೆ ಭೇಟಿಯನ್ನು ಬಂದ್ ಮಾಡಲಾಗಿತ್ತು. ಇದೀಗ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳ ಜೊತೆ ನೇರ ಭೇಟಿಗೆ ಮತ್ತೆ ಮಾ.21ರಿಂದ ಅವಕಾಶ ಒದಗಿಸಲಾಗುತ್ತಿದೆ ಎಂದು ಹಿಂಡಲಗಾ ಕಾರಾಗೃಹದ ಮುಖ್ಯ ಅಧೀಕ್ಷಕ ಶಹಾಬುದ್ದೀನ್ ಕೆ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಕೈದಿಗಳ ಭೇಟಿಗೆ ಬರುವ ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರು, ಮತ್ತು ವಕೀಲರು ಮುಂಚಿತವಾಗಿಯೇ ಕಾರಾಗೃಹದ ಇಮೇಲ್, ವಾಟ್ಸಾಪ್, ದೂರವಾಣಿ ಮೂಲಕ ಸಂಪರ್ಕಿಸಿ ವಿವರಗಳನ್ನು ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು. ಕೋವಿಡ್ ಲಕ್ಷಣಗಳುಳ್ಳವರಿಗೆ ಮತ್ತು ಎರಡು ಡೋಸ್ ಲಸಿಕೆ ಹಾಕಿಸಿಕೊಳ್ಳದಿರುವವರಿಗೆ ಭೇಟಿಯ ಅವಕಾಶವನ್ನು ನಿರ್ಬಂಧಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ ಅವರ ದೂರವಾಣಿ ಸಂಖ್ಯೆ 0831-2405275 ಹಾಗೂ ಮೊ. 9480806475ಗೆ ಸಂಪರ್ಕಿಸಬೇಕು. ಜೊತೆಗೆ ಇಮೇಲ್ ವಿಳಾಸ cpbgm.prisonskar@gov.in ನ್ನು ಸಂಪರ್ಕಿಸಿ ಎಂದು ಕಾರಾಗೃಹ ಅಧೀಕ್ಷರು ತಿಳಿಸಿದ್ದಾರೆ.
ಓದಿ : ಬುಧವಾರದಿಂದ 12-14 ವರ್ಷದೊಳಗಿನ ಮಕ್ಕಳಿಗೆ ವ್ಯಾಕ್ಸಿನ್.. 60 ಮೇಲ್ಪಟ್ಟ ಎಲ್ಲರಿಗೂ 'ಬೂಸ್ಟರ್'