ಬೆಳಗಾವಿ: ಎಂಇಎಸ್ ಮುಖಂಡನಿಗೆ ಮಸಿ ಸುರಿದ ಘಟನೆ ಖಂಡಿಸಿ ಎಂಇಎಸ್ ನೀಡಿದ್ದ ಬೆಳಗಾವಿ ಬಂದ್ ಕರೆಗೆ ಬೆಂಬಲ ದೊರೆತಿಲ್ಲ. ಕುಂದಾನಗರಿಯ ಜನತೆ ಬಂದ್ಗೆ ಬೆಂಬಲಿಸದಿರುವುದರಿಂದ ಎಂಇಎಸ್ಗೆ ಮತ್ತೊಮ್ಮೆ ಮುಖಭಂಗವಾಗಿದೆ.
ಮರಾಠಿ ಭಾಷಿಗರು ಕೂಡ ಎಂಇಎಸ್ ಬಂದ್ ಕರೆಗೆ ಸ್ಪಂದಿಸದಿರುವುದು ಇಲ್ಲಿ ಗಮನಿಸಬೇಕಾದ ಅಂಶ. ಅಧಿವೇಶನಕ್ಕೆ ಪ್ರತಿಯಾಗಿ ಎಂಇಎಸ್ ಕಾರ್ಯಕರ್ತರು ಸೋಮವಾರ ಮಹಾಮೇಳಾವ್ ನಡೆಸುತ್ತಿದ್ದರು. ಇದನ್ನು ಖಂಡಿಸಿ ಎಂಇಎಸ್ ಮುಖಂಡ ದೀಪಕ್ ದಳವಿಗೆ ಕನ್ನಡ ಪರ ಹೋರಾಟಗಾರ ಕಪ್ಪು ಮಸಿ ಸುರಿದಿದ್ದರು. ಕಪ್ಪು ಮಸಿ ಬಳಿದಿದ್ದನ್ನು ಖಂಡಿಸಿ ಎಂಇಎಸ್ ಮುಖಂಡರು ಇಂದು ಬೆಳಗಾವಿ ಬಂದ್ ಕರೆ ಕೊಟ್ಟಿದ್ದರು.
ಆದರೆ ಎಂಇಎಸ್ ಕರೆಗೆ ಬೆಳಗಾವಿ ಜನತೆ ಕ್ಯಾರೇ ಎಂದಿಲ್ಲ. ಎಂದಿನಂತೆ ಕುಂದಾನಗರಿಯಲ್ಲಿ ಸಂಚಾರ, ವ್ಯಾಪಾರ ಆರಂಭವಾಗಿದೆ. ಕೆಲವು ನಗರಗಳಲ್ಲಿ ಪ್ರತಿ ಮಂಗಳವಾರದಂತೆ ಇಂದೂ ಮಾರುಕಟ್ಟೆ ಬಂದ್ ಆಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಶಿವಾಜಿ ಉದ್ಯಾನವನದಲ್ಲಿ ಪೊಲೀಸರ ಬಿಗಿ ಭದ್ರತೆ ಇದೆ.
ಇದನ್ನೂ ಓದಿ: ನ್ಯಾಯಕ್ಕಾಗಿ ಭಾವಿ ವಕೀಲರ ಹೋರಾಟ : ಸುವರ್ಣಸೌಧದ ಎದುರು ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆ